
ಜ.26 ರಂದು ಅರೇಳ್ಳಿಯಲ್ಲಿ 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಣೆ
ಅರೆಹಳ್ಳಿ ನಿಂಗರಾಜು ಹೇಳಿಕೆ
ಹಾಸನ: ಸಂವಿಧಾನ ದಿನಾಚರಣೆ ಅಂಗವಾಗಿ ಜನವರಿ 26ರ ರಂದು ಬೇಲೂರು ತಾಲೂಕಿನ ಅರೇಳ್ಳಿಯಲ್ಲಿ 207ನೇ ಭೀಮ ಕೋರೇಗಾಂವ್ ವಿಜಯೋತ್ಸವ ಆಚರಿಸಲಾಗುವುದು ಎಂದು ದಲಿತ ಮುಖಂಡರಾದ ಅರೆಹಳ್ಳಿ ನಿಂಗರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭೀಮ ಕೋರೆಂಗಾವ್ ಯುದ್ಧ ದಲಿತರ ಸ್ವಾಭಿಮಾನದ ಪ್ರತೀಕವಾಗಿದೆ ಕೇವಲ 500 ಜನ ಮಹರ್ ಸೈನಿಕರು 28,000 ಪೇಶ್ವೆ ಸೈನಿಕರನ್ನು ಬಗ್ಗುಬಡಿದ ವಿಜಯದ ದಿನವೇ ಭೀಮಾ ಕೋರೇಗಾಂವ್ ವಿಜಯೋತ್ಸವವನ್ನು ಪ್ರತಿ ವರ್ಷವೂ ಹರೇಹಳ್ಳಿಯಲ್ಲಿ ಆಚರಿಸಲಾಗುತ್ತಿದ್ದು ಅದೇ ರೀತಿ ಈ ವರ್ಷವೂ ವಿಜೃಂಭಣೆಯ ಉತ್ಸವ ನಡೆಯಲಿದೆ ಎಂದರು. ಜನವರಿ 26 ರಂದು ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದ ಬಳಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೊರಡಲಿರುವ ಬೃಹತ್ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು ಹಾಗೂ ಅನುಯಾಯಿಗಳು ಭಾಗವಹಿಸಲಿದ್ದಾರೆ. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಅಂಬೇಡ್ಕರ್ ಭಾವಚಿತ್ರ ಹಾಗೂ ವಿಜಯ ಸ್ತಂಭದ ಮೆರವಣಿಗೆ ನಡೆಯಲಿದೆ ಎಂದರು.
ಅದೇ ದಿನ ಸಂಜೆ 6 ಸುಮಾರಿಗೆ ಪಟ್ಟಣದ ಪದವಿಪೂರ್ವ ಕಾಲೇಜು ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು ಕಾರ್ಯಕ್ರಮಕ್ಕೆ, ಬಾಬಾಸಾಹೇಬ್ ಅಂಬೇಡ್ಕರ್ ವಿಚಾರವಾದಿ ಬಿ.ಗೋಪಾಲ್, ಅಂಬೇಡ್ಕರ್ ಅನುಯಾಯಿ ಹಾಗೂ ನಟ ಚೇತನ್ ಅಹಿಂಸಾ, ಹಾಸ್ಯನಟ ಸಾಧುಕೋಕಿಲ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಭೀಮ ಕೋರೆಗಾಂವ್ ವಿಜಯೋತ್ಸವ ವಿಚಾರಗಳನ್ನು ಹಂಚಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಊಟ ಹಾಗೂ ಉಪಕಾರದ ವ್ಯವಸ್ಥೆ ಕಲ್ಪಿಸಲಾಗಿದ್ದು, ನಡೆಯಲಿರುವ ಅದ್ದೂರಿ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯ ಅಂಬೇಡ್ಕರ್ ಅಭಿಮಾನಿಗಳು, ಸಾರ್ವಜನಿಕರು, ಅರೆಹಳ್ಳಿ ಗ್ರಾಮಸ್ಥರು ಹಾಗೂ ಆ ಭಾಗದ ಎಲ್ಲಾ ಮುಖಂಡರು ಜನಪ್ರತಿನಿಧಿಗಳು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಜಯೋತ್ಸವ ಸಮಿತಿಯ ಅಧ್ಯಕ್ಷ ಎಸ್. ವಿರೂಪಾಕ್ಷ, ಲಿಂಗರಾಜು, ವಿಜಯೋತ್ಸವ ಸಮಿತಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ್, ರಮೇಶ್, ಸಿದರಾಜು, ದಿನೇಶ್, ಸೋಮಶೇಖರ್ ಕುಮಾರ್ ಇತರರು ಉಪಸ್ಥಿತರಿದ್ದರು.