ಹಾಸನ: ಸಂಗೀತ ಮತ್ತು ಸಾಹಿತ್ಯದ ಕಡೆ ಸಲ್ಪವಾದರೂ ಆಸಕ್ತಿ ಮತ್ತು ಪರಿಜ್ಞಾನ ಇಲ್ಲ ಎಂದರೇ ನಾವು ಪ್ರಾಣಿಗಳು ಹಾಗೂ ಪಕ್ಷಿಗಳು ಎಂದು ಹೇಳಿ ಬಿಡುತ್ತಾರೆ. ಸಲ್ಪವಾದರೂ ಆಸಕ್ತಿ ಬೆಳೆಸಿಕೊಳ್ಳಬೇಕೆಂದು ಸಂಸ್ಕೃತ ಭವನದ ಕಾರ್ಯದರ್ಶಿ ಪರಮೇಶ್ವರ ವಿ. ಭಟ್ ತಿಳಿಸಿದರು.

ನಗರದ ಸಂಸ್ಕöÈತ ಭವನದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಜಿಲ್ಲಾ ಘಟಕ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಬುಧವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಮಹಾಕವಿ ಕುಮಾರವ್ಯಾಸ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿ ಕುಮಾರವ್ಯಾಸನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಮನುಷ್ಯ ಜನ್ಮ ತುಂಬ ಶ್ರೇಷ್ಟವಾದ ಜನ್ಮ ಎಂದು ಹೇಳುತ್ತಾರೆ. ನಮ್ಮ ಸುತ್ತ ಮುತ್ತಲು ಪ್ರಾಣಿ ಪಕ್ಷಿಗಳನ್ನು ಹಾಗೂ ಮನುಷ್ಯರನ್ನು ಕಾಣುತ್ತೇವೆ. ಪಶು, ಪಕ್ಷಿಗಳು ನಮಗೂ ಏನು ವ್ಯತ್ಯಾಸವಿದೆ? ಯೋಚನೆ ಮಾಡಿದರೇ ತುಂಬ ವ್ಯತ್ಯಾಸವನ್ನು ಕಾಣುತ್ತೇವೆ. ಪಶು ಪಕ್ಷಿಗಳಿಗೆ ನಿದ್ರೆ ಮತ್ತು ಆಹಾರ ಈ ಎರಡು ವಿಶೇಷವಾಗಿದೆ. ಆಗೇ ಇಷ್ಟೆ ಮಾತ್ರ ಬದುಕು. ಪೂರ್ವ ಜನ್ಮದ ಪುಣ್ಯದ ಫಲ ಮನುಷ್ಯ ಜನ್ಮ ಸಿಕ್ಕಿದ್ದು, ಈ ಮನುಷ್ಯ ಜನ್ಮವನ್ನು ನಾವುಗಳು
ಸಾರ್ಥಕಪಡಿಸಿಕೊಳ್ಳಬೇಕಾಗಿದೆ ಇಲ್ಲವಾದರೇ ನಾವು ಕೂಡ ಪಶು, ಪಕ್ಷಿತರ ಆಗುಬಿಡುತ್ತೇವೆ ಎಂದರು. ಮನುಷ್ಯ ಜನ್ಮದಲ್ಲಿ ನಮಗೆ ಸಾಹಿತ್ಯ, ಸಂಗೀತ ಇವುಗಳ ಬಗ್ಗೆ ಸಲ್ಪ ಆಸಕ್ತಿ ಇಲ್ಲ, ಪರಿಜ್ಞಾನ ಇಲ್ಲ ಎಂದರೇ ನಾವು ಸಾಕ್ಷತ್ ಪಶುಗಳು ಎಂದು ಹೇಳಿ ಬಿಡುತ್ತಾರೆ. ಸಾಹಿತ್ಯದಲ್ಲಿ, ಸಂಗೀತದಲ್ಲಿ ಸಲ್ಪವಾದರೂ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಕುಮಾರವ್ಯಾಸನನ್ನು ನಾವುಗಳು ನೆನಪಿಸಿಕೊಳ್ಳಬೇಕು. ನಮ್ಮದೆಯಾದ ಸಾಹಿತ್ಯ ಪರಿಚಯವನ್ನು ಮಾಡಿಕೊಳ್ಳಬೇಕು. ಒಂದಷ್ಟು ಆಸಕ್ತಿ ರೂಡಿಸಿಕೊಳ್ಳಬೇಕು ಕಾರಣಕ್ಕಾಗಿ ಈ ವಾಚನ ಮತ್ತು ವ್ಯಾಖ್ಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಲಹೆ ನೀಡಿದರು. ಶ್ರೇಷ್ಟವಾದ ಕಲೆ ಎಂದರೇ ಅದು ಗಮಕ ಕಲೆಯಾಗಿದ್ದು, ನಾವುಗಳು ಅಳವಡಿಸಿಕೊಳ್ಳಬೇಕು. ಇಲ್ಲಿ ಸಂಗೀತದ ಜೊತೆ ಜೊತೆಯಲ್ಲಿ ಸಾಹಿತ್ಯವನ್ನು ಕೂಡ ಹೇಳುತ್ತಾರೆ. ಮುಂದಿನ ದಿನಗಳಲ್ಲಿ ಗಮಕ ಕಲೆಗೆ ವಿಶಿಷ್ಟ ಮನಸ್ಸನ್ನು ನಾವುಗಳು ಕೊಡಬೇಕೆಂದು ಹೇಳಿದರು.
ಇದೆ ವೇಳೆ ಮಹಾಕವಿ ಕುಮಾರವ್ಯಾಸ ವಿರಚಿತ ಕರ್ಣಾಟಕ ಭಾರತ ಕಥಾ ಮಂಜರಿಯ ಉದ್ಯೋಗ ಪರ್ವದಿಂದ ಕೃಷ್ಣ ಕರ್ಣ ಕುಂತಿ ಕುರಿತು ಸಂವಾದ ನಡೆಯಿತು. ಗಮಕಿಗಳು ಹಾಗೂ ಗಮಕ ವಿದ್ಯಾರ್ಥಿಗಳಿಂದ ಕವಿ ನಮನ ನೆರವೇರಿಸಲಾಯಿತು. ರಾಜ್ಯ ಮಟ್ಟದ ಸ್ಪರ್ದೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಇದೆ ವೇಳೆ ಗೌರವಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಗಮಕ ಕಲಾ ಪರಿಷತ್ತು ಅಧ್ಯಕ್ಷರಾದ ಕಲಾಶ್ರೀ ಗಣೇಶ್ ಉಡುಪ, ಉಪಾಧ್ಯಕ್ಷೆ ವಿಧೂಶಿ ರುಕ್ಮಿಣಿ ನಾಗೇಂದ್ರ ಇತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಜಿ.ಎನ್. ಅನಸೂಯ ಸ್ವಾಗತಿಸಿದರು. ವೇಧ ಶಿವಕುಮಾರ್ ಮತ್ತು ಸ್ವರ್ಣಾಂಭ ಪ್ರಾರ್ಥಿಸಿದರು.