ಹಾಸನ : ವಿವಿಧ ಕಡೆ ಎಟಿಎಂ ಒಳಗಿದ್ದ ಹಣ ಕಳ್ಳತನ ಮಾಡಲಾಗಿದೆ ಎಂದು ಸುದ್ದಿ ಕೇಳಿದ್ದೇವೆ. ಆದರೇ ಇಲ್ಲಿ ಮುಖ್ಯ ರಸ್ತೆ ಬಳಿ ಇದ್ದ ಎಟಿಎಂ ಮಿಷನ್ನನ್ನೇ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ತಾಲೂಕಿನ ಹನುಮಂತಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಗೊರೂರು ಮುಖ್ಯ ರಸ್ತೆ, ಹನುಮಂತಪುರ, ಪಂಚ ಬೃಹತ್ ಆಂಜನೇಯ ವಿಗ್ರಹದ ಸಮೀಪದಲ್ಲೆ ಇರುವ ಇಂಡಿಯಾ ಒನ್ ಎಟಿಎಂ ಮಿಷನ್ ಒಳಗಿನ ಹಣಕ್ಕೆ ವಂಚಾಕಿರುವ ಕಳ್ಳರು ಸುಮಾರು ಒಂದು ಗಂಟೆಯ ಆಸುಪಾಸಿನಲ್ಲಿ ಬಂದಿರುವ ಕಳ್ಳರು, ಕದಿಯುವಾಗ ಯಾರು ಸಮಸ್ಯೆ ಕೊಡಬಾರದೆಂದು ಮೊದಲೆ ಪ್ಲಾನ್ ಮಾಡಿರುವ ಕಳ್ಳರು ಮೊದಲು ಈ ಎಟಿಎಂ ಪಕ್ಕದಲ್ಲಿರುವ ಮನೆಗಳ ಮುಂದಿನ ಚಿಲಕಕ್ಕೆ ಕಡ್ಡಿ ಸಿಗಿಸಿದ್ದು, ನಂತರ ಎಟಿಎಂ ಬೂತ್ ಗೆ ನುಗ್ಗಿದ್ದಾರೆ. ಹಣ ತೆಗೆಯಲು ಹೋದರೇ ಸೈರನ್ ಇತರೆ ಸಮಸ್ಯೆಗಳು ಎದುರಾಗಬಹುದೆಂದು ಸೈರನ್ ಬಾರದಂತೆ ನಿಗಾವಹಿಸಿದ್ದು, ನಂತರ ಹಣದ ಸಮೇತ ಎಟಿಎಂ ಬಾಕ್ಸನ್ನೆ ಕದ್ದೊಯ್ದಿದ್ದಾರೆ. ಬೆಳಗಿನ ಸಮಯದಲ್ಲಿ ಜನರಿಗೆ ಎಟಿಎಂ ಕಳ್ಳತನ ಆಗಿರುವ ಬಗ್ಗೆ ತಿಳಿದು ಬಂದಿದೆ. ನಂತರ ಪೊಲೀಸರಿಗೆ ವಿಚಾರ ಮುಟ್ಟಿಸಲಾಗಿದ್ದು, ಬುಧವಾರದಂದು ಬೆಳಿಗ್ಗೆ ಎಸ್ಪಿ ಮೊಹಮ್ಮದ್ ಸುಜೀತಾ ಹಾಗೂ ಪೊಲೀಶ್ ಅಧಿಕಾರಿಗಳು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದೆ ವೇಳೆ ಹನುಮಂತಪುರದ ಮುರುಳೀಧರ ಮಾಧ್ಯಮದೊಂದಿಗೆ ಮಾತನಾಡಿ, ನೆನ್ನೆ ಸಂಜೆಯಿಂದ ರಾತ್ರಿ ೧೦:೩೦ರ ವರೆಗೂ ಇಲ್ಲೆ ತಿರುಗಾಡಿದ್ದೇವೆ. ಯಾರು ಈ ಕಳ್ಳತನ ಮಾಡಿದ್ದಾರೆ ಎಂಬುದು ಗೊತ್ತಾಗಿಲ್ಲ. ರಾತ್ರಿ ವೇಳೆ ಲಾರಿ ಹಾಗೂ ಇತರೆ ವಾಹನಗಳು ಓಡಾಡುತ್ತಿರುತ್ತದೆ. ೧೧ ಗಂಟೆಯ ನಂತರ ವಾಹನ ಸಂಚಾರ ಕಡಿಮೆ ಆಗುತ್ತದೆ. ಈ ವೇಳೆ ಕಳ್ಳತನ ಮಾಡಿರಬಹುದು ಎಂದರು. ಆರೆ ಮೂಲಕ ಎಟಿಎಂ ಬಾಕ್ಸ್ ಸೆಟ್ ನ್ನೆ ಕದ್ದಿದ್ದಾರೆ. ಪೊಲೀಶ್ ಬೀಟ್ ಬರುತ್ತಾರೆ. ಎಟಿಎಂ ಕದಿಯುವಾಗ ಶಬ್ಧ ಕೇಳಬಾರದೆಂದು ಮನೆಗಳ ಲಾಕ್ ಮಾಡಿದ್ದಾರೆ.
ಗ್ರಾಮದ ರಾಮಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಹನುಮಂತಪುರದಲ್ಲಿರುವ ಹಿಮಾಂತ್ ಸಿಂಗ್ ಪ್ಯಾಕ್ಟರಿಯಲ್ಲಿ ಸಾವಿರಾರು ಜನರು ಕೆಲಸ ಮಾಡುತ್ತಾರೆ. ಇಲ್ಲಿ ಹೆಚ್ಚಿನ ಪೊಲೀಸ್ ಸೆಕ್ಯೂರಿಟಿ ಅಗತ್ಯವಿದೆ. ಬೀಟ್ ಬಂದು ಹೋದರೇ ಪ್ರಯೋಜನವಿಲ್ಲ. ಪೊಲೀಶ್ ಇಲಾಖೆ ಈ ಬಗ್ಗೆ ಗಮನವಹಿಸಬೇಕು. ನಮ್ ವೃತ್ತಕ್ಕೆ ಒಂದು ಪೊಲೀಸ್ ಠಾಣೆ ಅಗತ್ಯವಿದೆ ಕೂಡಲೇ ಗಮನಹರಿಸಬೇಕೆಂದು ಮನವಿ ಮಾಡಿದರು.