
ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ರಾಜು ಕಾಪನೂರ್ ಸೇರಿದಂತೆ ಐವರು ಷರತ್ತು ಬದ್ಧ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಬೀದರ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ನೀಡಿದ ನಂತರ ರಾಜು ಕಪನೂರ್, ನಂದಕುಮಾರ್, ಗೊರಖನಾಥ್, ರಾಮಗೌಡ ಹಾಗೂ ಸತೀಶ್ ಎಂಬ ಆರೋಪಿಗಳು ಜಿಲ್ಲಾ ಕಾರಾಗೃಹದಿಂದ ಹೊರಗೆ ಬಂದಿದ್ದಾರೆ.
“ಐದು ಜನರನ್ನು ಇಂದು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಸಚಿನ್ ಪಾಂಚಾಳ್ ಗುತ್ತಿಗೆದಾರನೇ ಅಲ್ಲ. ಸಚಿನ್ ಅವರ ಸಹೋದರಿಯ ಖಾತೆಗೂ ಕೂಡ ರಾಜು ಕಪನೂರ್ ಅವರ ಮ್ಯಾನೇಜರ್ ಅವರಿಂದ 2 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಸಚಿನ್ ಆನ್ಲೈನ್ ಗೇಮ್ಗೆ ದಾಸನಾಗಿದ್ದ. ಈ ಜಾಲಕ್ಕೆ ಸಿಲುಕಿ ಎಷ್ಟು ಹಣ ಹಾಕಿದ್ದಾನೆ, ಯಾವ ಹಣ ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬುದು ತನಿಖೆಯಲ್ಲಿ ಹೊರ ಬರಲಿದೆ” ಎಂದು ಆರೋಪಿ ಪರ ವಕೀಲರು ಸುದ್ದಿಗಾರರಿಗೆ ತಿಳಿಸಿದ್ದಾರೆ.