ಹಾಸನ: ಆರೇಳು ಕೋಟಿ ಬೆಲೆ ಬಾಳುವ 200 ಜನ ರೈತರು ಸೇರಿ ಬೆಳೆದ ಅಡಿಕೆಯನ್ನು ಒಂದು ಕಡೆ ಗೋದಾಮಿನಲ್ಲಿ ಶೇಖರಣೆ ಮಾಡಲಾಗಿದ್ದು, ಈ ವೇಳೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿ ಅಡಿಕೆ ಶೇಖರಣೆಯ ಗೋದಾಮಿಗೆ ಬೀಗ ಹಾಕಿರುವುದಕ್ಕೆ ನ್ಯಾಯ ಕೇಳಲು ನೂರಾರು ಜನ ರೈತರು ಬುಧವಾರದಂದು ಹಾಸನ ನಗರದ ರಿಂಗ್ ರಸ್ತೆ ರೋಡ್ ಕುವೆಂಪು ನಗರದಲ್ಲಿರುವ ವಾಣಿಜ್ಯ ತೆರಿಗೆಗಳ ಇಲಾಖೆ, ಸರಕು ಮತ್ತು ಸೇವಾ ತೆರಿಗೆ ಕಾರ್ಯಾಲಯದ ಎದುರು ನ್ಯಾಯ ಕೇಳಲು ಜಮಾಯಿಸಿ ಎಚ್ಚರಿಸಿದರು.
ರೈತ ಸಂಘದ ಅರಕಲಗೂಡು ತಾಲೂಕು ಅಧ್ಯಕ್ಷ ಯೋಗಣ್ಣ ಮಾಧ್ಯಮದೊಂದಿಗೆ ಮಾತನಾಡಿ, ನಾವುಗಳೆಲ್ಲಾ ಅಡಿಕೆ ಬೆಳೆಗಾರರು. ಹಸಿ ಅಡಿಕೆಯನ್ನು ತೋಟದಲ್ಲಿ ಬೆಳೆದು ಅದನ್ನೆಲ್ಲಾ ಒಂದು ಕಡೆ ಸಾಗಿಸಿ ಎಣೆದು ಬೇಯಿಸಿ ಬಣ್ಣಕಟ್ಟಿ ಒಂದು ಕಡೆ ಗೋದಾಮಿನಲ್ಲಿ ಶೇಖರಣೆ ಮಾಡಿದ ನಂತರ ಸಿಮೆಂಟ್ ಕಣದಲ್ಲಿ ಒಣಗಿದ ಮೇಲೆ ಸ್ಟೋರ್ ಮಾಡಲಾಗುತ್ತದೆ. ನಮ್ಮಲ್ಲಿ ಲೇಬರ್ ಕೊರತೆ, ಸರಿಯಾದ ರೀತಿ ತೂಕದ ಮಿಷೆನ್ ರೈತರ ಬಳಿ ಇರುವುದಿಲ್ಲ. ಇದರಂದಲೇ ಕ್ಲಬ್ಬಾಗಿ 50 ರಿಂದ 100 ಜನ ಒಂದು ಕಡೆ ಅದನ್ನು ದಾಸ್ತಾನು ಮಾಡಲಾಗುತ್ತದೆ.
ಸಂತೋಷ್ ಎಂಬುವರ ಉಗ್ರಾಣದಲ್ಲಿ ಕಳೆದ ವರ್ಷವೂ ಕೂಡ ಇಡಲಾಗಿತ್ತು. ಅದರಂತೆ ಈ ವರ್ಷವೂ ಕೂಡ ಇಡಲಾಗಿದೆ ಎಂದರು. ಆದಾಯ ತೆರಿಗೆ ಇಲಾಖೆಯವರು ವರ್ತಕರ ಗೋಡನ್ ಸೀಜ್ ಮಾಡಬೇಕು. ಆದರೇ ಏಕಾಏಕಿ ಬಂದು ರೈತರ ಗೋಡನ್ ನನ್ನು ಸೀಜ್ ಮಾಡಿದ್ದು, ಆದರೇ ಸೀಜ್ ಮಾಡುವಾಗ ಈ ವೇಳೆ ರೈತರುಗಳೆಲ್ಲಾ ಸಹಕರಿಸಿದ್ದೇವೆ. ಹೊರತು ಅವರ ಕರ್ತವ್ಯಕ್ಕೆ ಯಾವುದೇ ಅಡ್ಡಿಪಡಿಸಿರುವುದಿಲ್ಲ. ಇದಕ್ಕೆ ಸಂಬAಧಪಟ್ ದಾಖಲೆಯನ್ನು ತಂದು ಇಂಕಮ್ ಟ್ಯಾಕ್ಸ್ ಕಛೇರಿ ಮುಂದೆ ರೈತರು ಬಂದಿದ್ದು, ಬೆಳಿಗ್ಗೆಯಿಂದ ಬಂದು ಕಾಯುತಿದ್ದರೂ ಯಾವ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರಿದರು. ನಮ್ಮನ್ನು ಕರೆಯಿಸಿ ತನಿಖೆ ಮಾಡಲಿ.
ನಾವು ದಾಖಲೆ ಕೊಡುತ್ತೇವೆ. ನೂರಾರು ಜನ ರೈತರು ತಮ್ಮ ತಮ್ಮ ಕೆಲಸ ಬಿಟ್ಟು ಆಧಾಯ ಇಲಾಖೆ ಕಛೇರಿ ಬಳಿ ಬಂದಿದ್ದು, ಇಲಿ ಕುಡಿಯುವುದಕ್ಕೆ ನೀರಿಲ್ಲ. ಇನ್ನು ಇಲ್ಲಿ ಯಾವ ವ್ಯವಸ್ಥೆಗಳು ಸರಿಯಾಗಿಲ್ಲ. ತೆರಿಗೆ ಇಲಾಖೆ ಅಧಿಕಾರಿಗಳು ಸಭೆ ಇದೆ ಎಂದು ಕಾರಣ ಹೇಳಿದ್ದು, ಬುಧವಾರದಂದು ಮದ್ಯಾಹ್ನ 3 ಗಂಟೆಯವರೆಗೂ ಅಧಿಕಾರಿಗಳನ್ನು ಕಾಯುತ್ತೇವೆ. ಈ ರೀತಿ ಅಧಿಕಾರಿಗಳು ಕಾಲಾಹರಣ ಮಾಡುವುದು ನೋಡಿದರೇ ಇಲ್ಲಿ ಏನಾದರೂ ಡಿಮ್ಯಾಂಡ್ ಮಾಡಿದ ರೀತಿ ಕಾಣುತ್ತಿದೆ ಎಂದು ರೈತರು ಅನುಮಾನಿಸಿದರು. ಇದಕ್ಕೆಲ್ಲಾ ಹೆದರಿ ಒಡುವುದಿಲ್ಲ. ನಾವು ದಾಖಲೆ ಕೊಡಲು ಸಿದ್ದರಿದ್ದೇವೆ ಎಂದು ಹೇಳಿದರು. ಏನಾದರೂ ಸಬೂಬು ಹೇಳಿಕೊಂಡು ಕಾಳಹರಣ ಮಾಡಿದರೇ ನಾವುಗಳು ಪೊಲೀಸ್ ಅನುಮತಿ ಪಡೆದು ಈ ಕಛೇರಿಯನ್ನೆ ಬಂದ್ ಮಾಡಿ ನ್ಯಾಯ ಕೇಳುತ್ತೇವೆ ಎಂದು ಎಚ್ಚರಿಸಿದರು.
ಅಡಿಕೆ ಬೆಳೆ ರೈತ ಇಮ್ರಾನ್ ಮಾತನಾಡಿ, ಅರಕಲಗೂಡು ಮತ್ತು ಹುಣಸೂರು ತಾಲೂಕು ರೈತರು ನಮ್ಮ ಅಡಿಕೆಯನ್ನು ಒಂದು ಜಾಗದಲ್ಲಿ ಇಟ್ಟು ತಯಾರು ಮಾಡುವುದಕ್ಕೆ ಕೊಡಲಾಗಿದೆ.ಒಂದು ಚೀಲ ಹಸಿ ಅಡಿಕೆ ಕೊಟ್ಟರೇ ಅವರು 12 ಕೆಜಿ ಅಡಿಕೆ ಕೊಡಬೇಕು. ಧರ ಹೆಚ್ಚಾದಗ ಅದನ್ನು ವ್ಯಾಪಾರ ಮಾಡುತ್ತೇವೆ. ಒಂದು ಜಾಗದಲ್ಲಿ ಇರುವುದೇ ತಪ್ಪು ಎಂದು ಹೇಳಿ ಅಡಿಕೆ ಇರುವ ಗೋದಾಮಿಗೆ ಬೀಗ ಹಾಕಿಕೊಂಡು ಸೀಜ್ ಮಾಡಿದ್ದಾರೆ. ದಾಖಲೆ ಎಲ್ಲಾ ನಮ್ಮ ಬಳಿ ಇದ್ದು, ನಮ್ಮ ಮಾಲು ನಮಗೆ ಕೊಟ್ಟರೆ ಸಾಕು ಎಂದರು. ಇಲ್ಲಿ ಕಛೇರಿಗೆ ಬಂದರೇ ನಮ್ಮನ್ನು ಕೇಳುವರೇ ಯಾರು ಇಲ್ಲ. ಅಂದಾಜು ಒಟ್ಟು 200 ಜನ ರೈತರು ಅಡಿಕೆಯನ್ನು ಒಂದು ಕಡೆ ಶೇಖರಣೆ ಮಾಡಲಾಗಿದೆ. ಕಡಿಮೆ ಎಂದರೂ ಆರು ಕೋಟಿ ಬೆಳೆ ಬಾಳುವ ಅಡಿಕೆ ಇದೆ. ಅಡಿಕೆ ಇರುವ ಗೋಡನ್ ಗೆ ಬೀಗ ಹಾಕಿದ ಮೇಲೆ ಅಲ್ಲಿ ಒಬ್ಬ ಸೆಕ್ಯೂರಿಟಿ ಕೂಡ ಯಾರನ್ನು ನೇಮಕ ಮಾಡಿರುವುದಿಲ್ಲ. ಈ ಗೂಡನ್ ಹಿಂಬಾಗದ ಬೀಗ ಹೊಡೆದು ತುಂಬಿಕೊAಡು ಹೋದರೇ ನಮ್ಮ ಮಾಲಿಗೆ ಬೆಲೆ ಇಲ್ಲಾದಾಗಿದೆ. ಈರೀತಿ ಆದರೇ ನಮ್ಮ ಬಡವರ ಹೊಟ್ಟೆಗೆ ಕಲ್ಲು ಹಾಕಿದ ಆಗೇ ಆಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡರು. ನಮ್ಮ ಮಾಲು ನಮಗೆ ಕೊಟ್ಟರೆ ಸಾಕು. ಕೊಡದಿದ್ದರೇ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶಿವಣ್ಣ, ಇಮ್ರಾನ್ ಮಕ್ತಾರ್, ನಾಗೇಶ್, ಸಣ್ಣಯ್ಯ, ಮಂಜು, ಲೋಕೇಶ್ ಇತರರು ಉಪಸ್ಥಿತರಿದ್ದರು.