ಹಾಸನ: ನಗರದ ಎಂ.ಜಿ. ರಸ್ತೆ ಬಳಿ ಇರುವ ಗಾಂಧಿ ಭವನದಲ್ಲಿ ಫೆಬ್ರವರಿ ೨೩ ರಂದು ಭಾನುವಾರದಂದು ವಿಜ್ಞಾನ ಕಾರ್ಯಕರ್ತರ ೯ನೇ ಸಮ್ಮೇಳನ ಅಂಗವಾಗಿ ಕೆ.ಎಸ್. ರವಿಕುಮಾರ್ ವಿರಚಿತ ಬಿಜಿವಿಎಸ್ ಪ್ರಕಟಿತ ಹವಾಮಾನ ಬದಲಾವಣೆ ಬೇಕೆ ಈ ದಿನಗಳು ಕುರಿತು ಪುಸ್ತಕ ಬಿಡುಗಡೆ ಮತ್ತು ವಿಚಾರ ಸಂಕೀರಣ ನಡೆಯಲಿದೆ ಎಂದು ಬಿಜಿವಿಎಸ್ ಗೌರವಾಧ್ಯಕ್ಷೆ ಡಾ. ಎ. ಸಾವಿತ್ರಿ ಮತ್ತು ಕಾರ್ಯದರ್ಶಿ ಅಹಮದ್ ಹಗರೆ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ೨೦೨೫ರ ಫೆಬ್ರವರಿ ೨೩ರಂದು ಹಾಸನ ಜಿಲ್ಲಾ ಬಿಜಿವಿಎಸ್ನ ೯ನೇ ಜಿಲ್ಲಾ ಸಮ್ಮೇಳನ ನಡೆಯಲಿದ್ದು ಇದರ ಅಂಗವಾಗಿ ಬೆಳಗಿನ ಉದ್ಘಾಟನಾ ಅಧಿವೇಶನದಲ್ಲಿ ಹಾಸನ ಜಿಲ್ಲೆಯ ವಿಜ್ಞಾನ ಬರಹಗಾರ ಕೆ.ಎಸ್.ರವಿಕುಮಾರ್ ಅವರು ಬಿಜಿವಿಎಸ್ ಹೊರ-ತರುತ್ತಿರುವ ಶೈಕ್ಷಣಿಕ ಮಾಸಪತ್ರಿಕೆ “ಟೀಚರ್” ನಲ್ಲಿ ಭೂಗ್ರಹ ಕಳೆದ ೩ವರ್ಷಗಳಿಂದ ಜಾಗತಿಕ ತಾಪಮಾನದ ಬಿಸಿಗೆ ಬದಲಾದ ಹವಾಮಾನ ಜಗತ್ತಿನ ದುಡಿಯುವ ವರ್ಗಗಳ ಜೀವನದ ಮೇಲೆ ಮತ್ತು ಗ್ರಾಮೀಣ ಸಂಸ್ಕೃತಿ ಮೇಲೆ ಮಾಡಿದ ಅನಾಹುತಗಳ ಕುರಿತು ದಾಖಲಿಸಿದ ಸರಣಿಲೇಖನಗಳ ಗುಚ್ಛ “ಹವಾಮಾನ ಬದಲಾವಣೆ ಬೇಕೆ ಈ ದಿನಗಳು” ಪುಸ್ತಕ ಬಿಡುಗಡೆ ಹಾಗೂ ಈ ಸಂದರ್ಭದಲ್ಲಿ ಹವಾಮಾನ ವಿಪ್ಲವ ಭೂಜೀವಿಗಳಮೇಲೆ ತಂದಿರುವ ಕಂಟಕದದ ಕುರಿತು ವಿಚಾರ ಸಂಕಿರಣ ಕೂಡ ನಡೆಯಲಿದೆ ಎಂದರು. ಈ ಸಮ್ಮೇಳನದ ಉದ್ಘಾಟನೆಯನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾಗಿದ್ದ ವಿಜ್ಞಾನ ಬರಹಗಾರ ಹಾಗೂ ತುಮಕೂರಿನ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ನಿರಂಜನಾರಾಧ್ಯ ಉದ್ಘಾಟಿಸಿ ತಮ್ಮ ಉದ್ಘಾಟನಾ ಭಾಷಣದಲ್ಲಿ ಪ್ರಸ್ತುತ ಸಂದರ್ಭದಲ್ಲಿ ವೈಜ್ಞಾನಿಕ ಮನೋಭಾವದ ಅಗತ್ಯತೆಯ ಕುರಿತು ಮಾತನಾಡಲಿದ್ದಾರೆ, ಬಿಜಿವಿಎಸ್ ಹಾಸನ ಜಿಲ್ಲಾ ಗೌರವಾಧ್ಯಕ್ಷೆ ಹಾಗೂ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞರಾದ ಡಾ. ಎ.ಸಾವಿತ್ರಿ “ಹವಾಮಾನ ಬದಲಾವಣೆ- ಬೇಕೆ ಈ ದಿನಗಳು” ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ. ವಿಜ್ಞಾನ ಬರಹಗಾರ ಹಾಗೂ ’ಟೀಚರ್’ ಪತ್ರಿಕೆಯ ಸಂಪಾದಕ ಉದಯ್ ಗಾಂಪ್ಟರ್ ಹವಾಮಾನ ವಿಪ್ಲವದ ಕುರಿತು ವಿಚಾರ ಮಂಡಿಸಲಿದ್ದಾರೆ. ಆಲೂರು ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರೋಹಿತ್ ಅಗಸರಹಳ್ಳಿ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕವಯತ್ರಿ ರೂಪಹಾಸನ, ಖಾಸಗಿ ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಕಾರ್ಯದರ್ಶಿ ಟೈಂಸ್ ಗಂಗಾಧರ್, ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ಟಿ.ಎ. ಪ್ರಶಾಮತಬಾಬು ಹಾಗೂ ಹಾಸನ ಜಿಲ್ಲಾ ಬಿಜಿವಿಎಸ್ ಉಸ್ತುವಾರಿ ಎಸ್.ವಜ್ರಮುನಿ ಭಾಗವಹಿಸಲಿದ್ದು, ಕೃತಿಕರ್ತ ಕೆ.ಎಸ್.ರವಿಕುಮಾರ್ ಉಪಸ್ಥಿತರಿರುತ್ತಾರೆ. ಮಧ್ಯಾಹ್ನದ ೨ನೇ ಅವಧಿಯಲ್ಲಿ ಪ್ರತಿನಿಧಿ ಅದಿವೇಶನ ನಡೆಯಲಿದ್ದು ಬಿಜಿವಿಎಸ್ ರಾಜ್ಯ ಕಾರ್ಯದರ್ಶಿ ಪ್ರಶಾಂತಬಾಬು ಅಧಿವೇಶನ ಉದ್ಘಾಟಿಸುವರು ಎಂದು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ವಿಜ್ಞಾನ ತಂತ್ರಜ್ಞಾನ ಜನರ ಕಲ್ಯಾಣಕ್ಕಾಗಿ ಉಪಯೋಗವಾಗಬೇಕು. ಜನಪರ ವಿಜ್ಞಾನ ತಂತ್ರಜ್ಞಾನ ಯೋಜನೆಗಳು ಜಾರಿಗೆ ಬರಬೇಕು. ಜನರ ಭಾಗವಹಿಸುವಿಕೆಯಿಂದ ಅಭಿವೃದ್ಧಿ ಯೋಜನೆಗಳು ರೂಪುಗೊಂಡಿ ಜನರಿಯಾಗಿದೇನ ಪರಿಸರ ಸಂರಕ್ಷಣೆ, ಯುದ್ಧರಹಿತ ಪ್ರಪಂಚ, ವೈಜ್ಞಾನಿಕ ಚಿಂತನೆ ಬೆಳೆಯಬೇಕು ಎಂಬ ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ದೇಶದಾದ್ಯಂತ ಜನ ವಿಜ್ಞಾನ ಚಳುವಳಿಗಳನ್ನು ಕಟ್ಟಿ ಬೆಳೆಸುತ್ತಿರುವುದು ಭಾರತ ಜ್ಞಾನ ವಿಜ್ಞಾನ ಸಮಿತಿ. ಇದು ರಾಷ್ಟ್ರ ಮಟ್ಟದ ಸ್ವಯಂಸೇವಾ ಸಂಸ್ಥೆಯಾಗಿ ಪ್ರಧಾನವಾಗಿ ಪ್ರಾಥಮಿಕ ಶಿಕಾ ಜನಾರೋಗ್ಯ, ಮಹಿಳಾ ಸಬಲೀಕರಣ ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ಕಳೆದ ಸಂವರ್ಷಗಳಿಂದ ಶ್ರಮಿಸುತ್ತಿದೆ ಎಂದರು. ಬಿಜಿವಿಎಸ್ ಹಾಸನ ಜಿಲ್ಲೆಯಲ್ಲೂ ಸಹ ಕಳೆದ ೩೪ವರ್ಷಗಳಿಂದ ಸಾಕ್ಷರತಾ ಆಂದೋಲನ, ಪವಾಡ ರಹಸ್ಯ ಬಯಲು, ಸಂತಸ ಕಲಿಕೆಯ ಚಿಣ್ಣರ ಮೇಳ, ಪರಿಸರ ಪಯಣ, ಮಕ್ಕಳ ವಿಜ್ಞಾನ ಹಬ್ಬ ಮಕ್ಕಳ ಸಾಹಿತ್ಯ ಸಂಭ್ರಮ, ಜನರಿಗಾಗಿ ಆರೋಗ್ಯ-ಜನತೆಯೆಡೆಗೆ ಆರೋಗ್ಯ ಖಗೋಳಯಾನದಂತಹ ಚಟುವಟಿಕೆಗಳನ್ನು ಶಿಕ್ಷಕರಿಗೆ, ಜನಪ್ರತಿನಿಧಿಗಳಿಗೆ, ಸಂಘ-ಸಂಸ್ಥೆಗಳಿಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದರೂ ಕೂಡ ಜನತೆಯಲ್ಲಿ ಮೌಡ್ಯಾಚಾರ, ವಿಚಾರ ಶೂನ್ಯತೆ, ಅಂಧವಿಶ್ವಾಸಗಳು ಹೆಚ್ಚುತ್ತಿರುವುದು ಢಾಳಾಗಿ ಗೋಚರಿಸುತ್ತಿವೆ ಇವಕ್ಕೆ ಮಾಧ್ಯಮಗಳ ಕೊಡುಗೆಯೂ ಹೇರಳವಾಗಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜಿವಿಎಸ್ ಜಿಲ್ಲಾದ್ಯಕ್ಷ ಹೆಚ್.ಟಿ. ಗುರುರಾಜು, ಜಿಲ್ಲಾ ಉಪಾಧ್ಯಕ್ಷ ಮಮತಶಿವು, ತಾಲೂಕಿನ ಅಧ್ಯಕ್ಷ ಹೆಚ್.ಜಿ. ಮಂಜುನಾಥ್ ಸಹ ಕಾರ್ಯದರ್ಶಿ ಚಿನ್ನೇನಹಳ್ಳಿ ಸ್ವಾಮಿ ಇತರರು ಉಪಸ್ಥಿತರಿದ್ದರು.