
ಹಾಸನ : ಮಾನಸಿಕ ವಿಕಲಚೇತನರು ಮೊದಲು ಶಿಕ್ಷಣ ಪಡೆದುಕೊಂಡು ನಂತರದಲ್ಲಿ ಆರ್ಥಿಕವಾಗಿ ಉತ್ತಮ ದಾರಿ ಕಂಡುಕೊಳ್ಳಬಹುದು. ದೇಹದ ಆರೋಗ್ಯ ಉತ್ತಮವಾಗಿದ್ದರೇ ಸಮಾಜದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದು ವಿಶ್ವವಿದ್ಯಾಲಯ ಹೇಮಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಎಸ್.ಜೆ. ಮಹೇಶ್ ತಿಳಿಸಿದರು.
ನಗರದ ವಿದ್ಯಾನಗರದಲ್ಲಿರುವ ಸಾಧ್ಯ ಮಾನಸಿಕ ವಿಶೇಷ ಚೇತನರ ಮಕ್ಕಳ ಶಾಲಾ ಆವರಣದಲ್ಲಿ ಹಾಸನ ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳಲಾಗಿದ್ದ ಪ್ರಸ್ತುತ ವಿದ್ಯಾಮಾನದಲ್ಲಿ ವಿಕಲ ಚೇತನರ ಆರೋಗ್ಯದ ಜವಬ್ಧಾರಿಗಳು ಮತ್ತು ಅವರಿಗೆ ಸಿಗುತ್ತಿರುವ ಸರಕಾರದ ಸೌಲಭ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿ, ಅಂಗವಿಕಲತೆ ಯಾವ ಕಾರಣಕ್ಕೆ ಆಗುತ್ತಿದೆ? ಅಪಘಾತವಾದ ಸಮಯದಲ್ಲಿ ದೇಹದಲ್ಲಿನ ಆರೋಗ್ಯದ ವ್ಯತ್ಯಾಸದಲ್ಲಿ ಈ ಅಂಗವಿಕಲತೆ ಕಂಡು ಬರುತ್ತಿದೆ.
ಮನುಷ್ಯನು ಆರೋಗ್ಯಕರವಾಗಿ ಗಟ್ಟಿಯಾಗಿರಬೇಕು. ಮಾನಸಿಕವಾಗಿ, ದೈಹಿಕವಾಗಿ ಆರೋಗ್ಯವಾಗಿರುವುದರ ಜೊತೆಗೆ ಶಿಕ್ಷಣ ಪಡೆಯಬೇಕು. ಇನ್ನು ಸಮಾಜದಲ್ಲಿ ಸತ್ಪçಜೆಯಾಗಿ ಸಮಾದಲ್ಲಿ ಉತ್ತಮ ಕೆಲಸ ಮಾಡಬೇಕು. ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರೀಕ ಸರಬರಾಜು ಇಲಾಖೆ ಮತ್ತು ವಿಕಲಚೇತನರ ಇಲಾಖೆಯಿಂದ ಇರುವ ಎಲ್ಲಾ ಸೌಲಭ್ಯಗಳನ್ನು ವಿಕಲ ಛೇತನರಿಗೆ ಕೊಡಲಾಗುತ್ತಿದೆ. ಶೇಕಡ 40 ರಷ್ಟು ಅಂಗವಿಕಲತೆ ಇದ್ದರೇ ಸರಕಾರದಿಂದ ಸಿಗುವಂತಹ ಸೌಲಭ್ಯವನ್ನು ಪಡೆದುಕೊಂಡು ತಮ್ಮ ಆರೋಗ್ಯ ಸುಧಾರಿಸಿಕೊಳ್ಳಬಹುದಾಗಿದೆ.
ಒಂಟಿತನ ಕಾಡಿದಾಗ ಅಂಗವಿಲತೆ ಕಾಣಿಸಿ ಏನು ಸಾಧನೆ ಮಾಡುವುದಕ್ಕೆ ಆಗುವುದಿಲ್ಲ ಎಂದು ಕಿವಿಮಾತು ಹೇಳಿದರು. ಅಂಗವಿಕಲರು ಆರ್ಥಿಕವಾಗಿ ಮೇಲೆ ಬರಬೇಕಾದರೇ ಮೊದಲು ಸರಿಯಾದ ಶಿಕ್ಷಣ ಸಿಗಬೇಕು. ಜವಬ್ಧಾರಿಯುತವಾಗಿ ಇದ್ದರೇ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಗಮನ ಇಟ್ಟುಕೊಳ್ಳಬೇಕು. ಆರೋಗ್ಯ ಉತ್ತಮವಾಗಿದ್ದರೇ ಏನಾದರೂ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.ನೆಗಟಿವ್ ಯೋಚನೆ ಮಾಡದೇ ಮನಸ್ಸನ್ನು ಉಲ್ಲಾಸ ಮಾಡಿಕೊಂಡು ಯಾವಾಗಲು ಪಾಸಿಟಿವ್ ವಿಚಾರದ ಕಡೆ ಹೆಚ್ಚು ಗಮನ ಕೊಡುವಂತೆ ಕರೆ ನೀಡಿದರು ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಹೇಮಗಂಗೋತ್ರಿ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ವಿನಯ್, ಸಾಧ್ಯ ವಿಶೇಷ ಚೇತನ ಮಕ್ಕಳ ಶಾಲೆ ಹೆಡ್ ಮಾಸ್ಟರ್ ಹೆಚ್. ಉಮೇಶ್, ಎ.ಜೆ. ದೀಪಿಕಾ, ಸಿ. ಪೂಜಾ, ರಂಜಿತಾ, ಎ.ಪ. ದೀಪಿಕಾ, ವೈಶಾಲಿ, ಇಂಧುಕುಮಾರ್, ಹೆಚ್.ಎಸ್. ಪೂಜಾ, ಸೃಜನ್, ಇಶ್ವರ್ ಸಾತ್ವೀಕ್ ಇತರರು ಉಪಸ್ಥಿತರಿದ್ದರು.