ಹಾಸನ: ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಸನ ಕೃಷಿ ಕಾಲೇಜನ್ನು ಬೆಂಗಳೂರು ವಿಶ್ವ ವಿದ್ಯಾನಿಲಯದ ವ್ಯಾಪ್ತಿಯಲ್ಲೇ ಉಳಿಸಬೇಕು ಈ ನಿಟ್ಟಿನಲ್ಲಿ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತಾಡಿದ ಅವರು, ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಂಗಳೂರು ವಿಶ್ವ ವಿದ್ಯಾಲಯದ ಅಡಿಯಲ್ಲಿ ಕೃಷಿ ಕಾಲೇಜು ಇರುವುದರಿಂದ ವಿಧ್ಯಾರ್ಥಿಗಳಿಗೆ ಅನುಕೂಲ ಆಗಲಿವೆ. ಆದುದರಿಂದ ಜಿಲ್ಲೆಯ ಜೆಡಿಎಸ್ ನನಾಲ್ವರು ಶಾಸಕರು ಮುಖ್ಯಮಂತ್ರಿ ಸೇರಿ ಸಂಭಂದಿಸಿದ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು. ಹಾಸನ ಕೃಷಿ ಕಾಲೇಜು ಬೆಂಗಳೂರು ವಿಶ್ವ ವಿದ್ಯಾಲಯದ ವ್ಯಾಪ್ತಿಯಲ್ಲಿ ಇರುವುದರಿಂದ ವಿದ್ಯಾರ್ಥಿಗಳ ಓಡಾಟಕ್ಕೆ ಅನುಕೂಲ ಆಗಲಿದೆ, ಪ್ರತಿಷ್ಟಿತ ವಿಶ್ವ ವಿದ್ಯಾನಿಲಯವಾಗಿ ಗುರುತಿಸಿಕೊಂಡಿರುವ ಬೆಂಗಳೂರು ವಿವಿ ಯನ್ನು ವಿಭಾಗ ಮಾಡುವ ಕೆಲಸ ಮಾಡಬಾರದು, ಶಾಸಕರಾದ ಸುರೇಶ್, ಮಂಜು ಅವರಿಗೂ ಪತ್ರ ಬರೆಯಲು ಹೇಳುವೆ ಎಂದರು ಇದನ್ನು ರಾಜಕೀಯವಾಗಿ ತೆಗೆದುಕೊಂಡರೆ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಹಾಸನದ ಸೋಮನಹಳ್ಳಿ ಕಾವಲು ಜಾಗದಲ್ಲಿ ೨೫೦ ಎಕರೆ ಜಾಗದಲ್ಲಿ ತೋಟಗಾರಿಕೆ ವಿವಿ ಮಾಡಲು ಹೊರಟಾಗ ಅದಕ್ಕೂ ಅಡ್ಡಿ ಪಡಿಸಿದರು. ಒಂದು ವೇಳೆ ಮಂಡ್ಯ ಯುನಿವರ್ಸಿಟಿಗೆ ಸೇರಿಸಿದರೆ ಕಾನೂನು ಹೋರಾಟ ಮಾಡಬೇಕಾಗುತ್ತದೆ. ಬೇಕಾದರೆ ಮಂಡ್ಯದಲ್ಲಿ ಹೊಸ ಕಾಲೇಜು ಮಾಡಲಿ. ಯಡಿಯೂರಪ್ಪ ಅವರು ಶಿವಮೊಗ್ಗಕೆ ತೆಗೆದುಕೊಂಡು ಹೋಗಲು ಪ್ರಯತ್ನಿಸಿದ್ದರು. ಅಧಿವೇಶನದಲ್ಲಿ ಹೋರಾಟ ಮಾಡಿ ಹಾಸನದಲ್ಲಿ ಉಳಿಸಿದ್ದೇನೆ. ಇದಲ್ಲದೆ ಹಾಸನದಲ್ಲಿ ೭೬೦ ಅಂಗನವಾಡಿ ಹುದ್ದೆಗಳು ಖಾಲಿ ಇವೆ, ಜಿಲ್ಲಾಡಳಿತ ಸಂದರ್ಶನ ಹಾಗೂ ನೇಮಕಾತಿಗೆ ಅವಕಾಶ ನೀಡುತ್ತಿಲ್ಲ, ಹೋರ ಗುತ್ತಿಗೆ ನೌಕರರಿಗೆ, ಬೋಧಕ ಬೋಧಕೇತರ ಸಿಬ್ಬಂದಿಗಳು, ಸೇರಿದಂತೆ ಹಲವರಿಗೆ ಕಳೆದ ಮೂರ್ನಾಲ್ಕು ತಿಂಗಳಿನಿಂದ ಸಂಬಳ ಕೊಟ್ಟಿಲ್ಲ ಎಂದು ದೂರಿದರು.
ಜನರ ತೆರಿಗೆ ಹಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷರಿಗೆ ತಿಂಗಳಿಗೆ ೨೫ ಸಾವಿರ ಹಾಗೂ ಜಿಲ್ಲಾಧ್ಯಕ್ಷರಿಗೆ ೫೦ ಸಾವಿರ ನಿಗದಿ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹಂಚಿಕೆ ಮಾಡಲಾಗುತ್ತಿದೆ, ರಾಜ್ಯದ ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಸರ್ಕಾರ ಲೂಟಿ ಮಾಡುತ್ತಿದ್ದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಜೆಡಿಎಸ್ ಶಾಸಕರು, ಕಾರ್ಯಕರ್ತರಿಗೆ ಡಿಸಿಎಂ ಡಿಕೆಶಿ ಆಫರ್ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಈ ದುಸ್ಥಿತಿ ಬಂದಿದೆ ಎಂದು ವ್ಯಂಗ್ಯವಾಗಿ ಮಾತನಾಡಿದ ರೇವಣ್ಣನವರು, ಇನ್ನೊಬ್ಬರ ಮನೆ ಬಾಗಿಲಿಗೆ ಬಂದು ಕರೆಯುವ ಸ್ಥಿತಿ ಬಂದಿದೆ. ಬೇರೆ ಸಮಯದಲ್ಲಿ ದೇವೇಗೌಡರು, ಕುಮಾರಣ್ಣನ ಕಾಲು ಹಿಡಿಯುತ್ತಾರೆ. ಕಾಂಗ್ರೆಸ್ ೧೩೬ ಸೀಟ್ ಗೆದ್ದು, ಗ್ಯಾರೆಂಟಿನು ಕೊಟ್ಟು ಎಲ್ಲಿ, ಯಾವಾಗ ಸರ್ಕಾರ ಏನಾಗುತ್ತೋ ಅಂಥಾ ಬೇರೆಯವರನ್ನು ಕರೆಯುವ ಸ್ಥಿತಿ ಬಂದಿದೆ. ಇವಕ್ಕೆಲ್ಲ ಹೆದರಲ್ಲ ಟೈಂ ಬರುತ್ತೆ, ಗೊತ್ತಿದೆ ನನಗೆ. ದೇವೇಗೌಡರ ಕಣ್ಮುಂದೆ ಏನೇನ್ ನಡೆಯುತ್ತೆ ನೋಡೋಣ ಎಂದು ಹೇಳಿದರು.