ಹಾಸನ: ಜಿಲ್ಲೆಯ ಉಸ್ತುವಾರಿಯಾಗಿ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ರಾಜೀನಾಮೆ ನೀಡಿ ಹೊರ ಹೋಗುವುದು ಉತ್ತಮ ಎಂದು ಕೆ.ಎನ್. ರಾಜಣ್ಣ ವಿರುದ್ಧ ಸಮಾಜ ಸೇವಕ ಅಕ್ಮಲ್ ಜಾವೀದ್ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿ, ಉಸ್ತುವಾರಿ ಸಚಿವರಾದ ಕೆ.ಎನ್. ರಾಜಣ್ಣ ಅವರೇ ನಮುಸ್ಕಾರ. ಹಾಸನದ ಉಸ್ತುವಾರಿಯಾಗಿ ಹಾಸನದ ಜನತೆಗೆ ತಾವು ನೀಡುತ್ತಿರುವ ಗೌರವವಾದರು ಏನು? ಹಾಸನದಲ್ಲಿ ಎಷ್ಟು ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ್ದೀರಾ? ಎಷ್ಟು ಉದ್ಯೋಗ ಸೃಷ್ಟಿಸಿದ್ದೀರಾ? ಒಮ್ಮೆ ಸಾರ್ವಜನಿಕವಾಗಿ ಪ್ರಕಟಿಸಿ. ರಾಜ್ಯದ ಜನತೆ ಸರ್ಕಾರದ ಬೊಗಸೆಯನ್ನು ತುಂಬಿಸುತ್ತಾರೆ ತಮ್ಮ ಖರ್ಚು ವೆಚ್ಚಗಳನ್ನು ಸರ್ಕಾರದ ವತಿಯಿಂದ ನೋಡಿಕೊಳ್ಳುತ್ತಾರೆ. ನಿಮಗೆ ಓಡಾಡಲು ಕಾರು, ವಾಸಿಸಲು ಬಂಗಲೆಯನ್ನು ಜನ ಸೇವೆಗಾಗಿ ನೀಡಿರುತ್ತಾರೆ ಫೋನ್ ಸಹ ನೀಡಿರುತ್ತಾರೆ, ನಿಮ್ಮ ಕುಟುಂಬದ ಆರೋಗ್ಯ ವೆಚ್ಚವನ್ನು ನಮ್ಮ ತೆರಿಗೆ ಹಣದಿಂದ ಸರ್ಕಾರವೇ ಭರಿಸುತ್ತದೆ. ಜನರಿಗೆ ಸಮಸ್ಯೆ ಆದಾಗ ತಮ್ಮ ಗಮನಕ್ಕೆ ತರಲು ತಮ್ಮ ಊರಿಗಾಗಲಿ ರಾಜ್ಯ ರಾಜಧಾನಿ ಕಚೇರಿಗಾಗಲಿ ಅಥವಾ ಎಲ್ಲೇ ಕಂಡರು ಭೇಟಿಯಾಗಲು ಬಂದರೆ ನಾಳೆ ಬನ್ನಿ ಅನ್ನುವ ಉಡಾಫೆ ಉತ್ತರವನ್ನು ನೀಡುತ್ತೀರಾ. ನಿಮ್ಮ ನಡೆಗೆ ಖಂಡನೀಯ ಎಂದರು. ನಮ್ಮ ಹಾಸನ ಜಿಲ್ಲೆಯ ಸಂಸದರು ಹಾಗು ತಾಲ್ಲೂಕಿನ ೭ ಕ್ಷೇತ್ರದ ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳು ಸ್ಪಂದಿಸುವ ರೀತಿಯಲ್ಲಿ ಉಸ್ತುವಾರಿ ಸಚಿವರಾದ ನೀವು ಮತ್ತು ನಿಮ್ಮಲ್ಲಿ ಆ ಶಿಸ್ತಿನ ನಡೆ ಕಾಣುತ್ತಿಲ್ಲ. ದಯಮಾಡಿ ಕೈ ಮುಗಿದು ಹಾಸನ ಜನತೆ ನಿಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇವೆ ಎಂದರು.
ಇನ್ನು ಮುಂದೆಯಾದರೂ ರಾಜಕೀಯದಲ್ಲಿ ನಿಮಗಿಂತ ಚಿಕ್ಕವರಾದ ಈ ನಮ್ಮ ಹಾಸನ ಜಿಲ್ಲೆಯ ಕ್ಷೇತ್ರದ ಸಂಸದರಿಂದ ಹಾಗು ೭ ಕ್ಷೇತ್ರದ ಶಾಸಕರಿಂದ ಮತ್ತು ಪರಾಜಿತ ಅಭ್ಯರ್ಥಿಗಳಿಂದ ರಾಜಕೀಯ ಪಾಠವನ್ನು ಕಲಿತುಕೊಳ್ಳಿ ಜನಸೇವೆಗಾಗಿ ತಾವು ಜನಪ್ರತಿನಿಧಿ ಆಗಿರುವುದೇ ಹೊರತು ತುಘಲಕ್ ದರ್ಬಾರ್ ನಡೆಸಲು ಅಲ್ಲ ತಮ್ಮ ಈ ಮನಸ್ಥಿತಿ ಬದಲಾಗಬೇಕು ಚುನಾವಣಾ ಸಮಯಗಳಲ್ಲಿ ಮಂದಿರ ಮಸೀದಿ ಚರ್ಚ್ ಭೇಟಿ ನೀಡುವ ನೀವು ಕೊಟ್ಟಿರುವ ಆಶ್ವಾಸನೆಗಳನ್ನು ಎಷ್ಟು ಪೂರೈಸಿದ್ದೀರಾ? ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಸುಪ್ರೀಂಕೋರ್ಟ್ ನ ತೀರ್ಪು ಖಾಸಗಿ ಬಸ್ಸುಗಳ ಬಗ್ಗೆ ಪರ್ಮಿಟ್ ನೀಡಲು ಸರ್ಕಾರಕ್ಕೆ ನಿರ್ದೇಶನ ನೀಡಿದ ಈ ಆದೇಶವನ್ನು ಪಾಲಿಸಲು ತಮ್ಮ ಗಮನಕ್ಕೆ ತರಲು ಬಯಸಿ ಬಂದಿರುತ್ತೇವೆ ಹೊರತು ಭಿಕ್ಷೆ ಎತ್ತಲು ಬಂದಿರುವುದಿಲ್ಲ. ಮತದಾರರ ಋಣದಲ್ಲಿ ಜನಪ್ರತಿನಿಧಿಗಳು ಹೊರತು ಜನಪ್ರತಿನಿಧಿಯ ಋಣದಲ್ಲಿ ಮತದಾರರು ಇಲ್ಲ ದಯಮಾಡಿ ತಮಗೆ ನಮ್ಮ ಹಾಸನದ ಜಿಲ್ಲೆಯ ಉಸ್ತುವಾರಿಯಾಗಿ ಯಾವುದೇ ಅಭಿವೃದ್ಧಿ ಮಾಡಲು ಸಾಧ್ಯವಾಗದೆ ಇದ್ದಲ್ಲಿ ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತ ಎಂದು ದೂರಿದರು. ಬರೀ ಬಾಯಿ ಮಾತಿಗೆ ಪ್ರಚಾರಕ್ಕಾಗಿ ಹೇಳುವುದಲ್ಲ ದಯಮಾಡಿ ತಮ್ಮ ತಾರತಮ್ಯ ನೀತಿಯನ್ನು ಸರಿಪಡಿಸಿಕೊಂಡು ಎಲ್ಲರನ್ನೂ ಸಮಾನತೆಯಿಂದ ನೋಡುವುದನ್ನು ಕಲಿತುಕೊಳ್ಳಿ ಎಂದು ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಅಜಾದ್ ಪಾಷಾ, ಅಜಾರ್, ತೌಹಿದ್ ಇತರರು ಉಪಸ್ಥಿತರಿದ್ದರು