
ಹಾಸನ: ಒಂದನೇ ತರಗತಿ ಓದುತ್ತಿರುವ ನನ್ನ ಮಗನ ತಲೆಗೆ, ಬೆನ್ನಿಗೆ ಹೊಡೆದು ಕೈ ಹಿಸುಕಿ, ಮೆಟ್ರೆ ಹಿಸುಕಿ ನಮ್ಮನ್ನು ಹಿಯಾಳಿಸುತ್ತಿರುವ ತಾಲೂಕಿನ ದುದ್ದ ಹೋಬಳಿಯ ಕಬ್ಬಳಿ ಸರಕಾರಿ ಶಾಲೆಯ ಟೀಚರ್ ಮೇಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಬಾಲಕನಾದ ನೂತನ್ ತಾಯಿ ಸರಳ ಮತ್ತು ತಂದೆ ರಾಜೇಶ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೆ ವೇಳೆ ಮಗುವಿನ ತಾಯಿ ಸರಳ ಮಾಧ್ಯಮದೊಂದಿಗೆ ಮಾತನಾಡಿ, ನಾನು ನನ್ನ ಮಗನನ್ನು ತಾಲೂಕಿನ ದುದ್ದ ಹೋಬಳಿಯ ಕಬ್ಬಳಿ ಶಾಲೆಗೆ ಕಳುಹಿಸಲಾಗಿದ್ದು, ಆಗ ಫೈಂಟ್ ಮಾಡುತ್ತಿದ್ದರು. ಇವನು ಫೈಂಟ್ ಮುಟ್ಟಿದಾಗ ಮೇಡಂ ತಲೆಗೆ, ಕೈಗೆ ಎಲ್ಲಾ ಕಡೆ ಹೊಡೆದಿದ್ದಾರೆ.
ಸಂಜೆ ಮನೆಗೆ ಬಂದಾಗ ಹುಷಾರಿಲ್ಲದೇ ಮಲಗಿದನು. ಹುಷಾರಿಲ್ಲದ ಕಾರಣ ಬೆಳಿಗ್ಗೆ ಶಾಲೆಗೆ ಕಳಹಿಸಲಿಲ್ಲ. ಶಾಲೆಗೆ ಹೋಗದಿರದ ಬಗ್ಗೆ ಪಕ್ಕದ ಮನೆಯವರು ವಿಚಾರಿಸಿದ್ದು, ಮೇಡಂ ಹೊಡೆದಿದ್ದರಿಂದ ಶಾಲೆಗೆ ಹೋಗಿಲ್ಲ ಎಂದುಹ ಏಳಿದೆ. ಈ ವಿಚಾರವನ್ನು ಯಾರೊ ಒಬ್ಬರು ಶಾಲೆಯ ಮೇಡಂಗೆ ಹೇಳಲಾಯಿತು. ಅದಕ್ಕೆ ನಿಮ್ಮಮ್ಮ ದೇವದತರ ಇದ್ದಾಳೆ, ಅಂಗಿದ್ದಾಳೆ, ಹಿಂಗಿದ್ದಾಳೆ ಎಂದು ಹಿಯಾಳಿಸಿದಲ್ಲದೇ ನೀನು ಶಾಲೆಗೆ ಬರಬೇಡ ಏಕೆ ಬರುತ್ತೀಯಾ ಎಂದು ನನ್ನ ಮಗನ ಕೈಗೆ ತಲೆಗೆ ಹೊಡೆದು ಮೆಟ್ರೆ ಹಿಸುಕಿದಲ್ಲದೇ ಕೈ ಚಿಂಟಿದ್ದಾರೆ ಎಂದು ದೂರಿದರು. ಇದರಿಂದ ಇವನು ಹೆದರಿದ್ದು, ನಿಮ್ಮಮ್ಮ ಏನು ಮಾಡುತ್ತಾಳೆ? ನಮ್ಮಣ್ಣ ಸಿ.ಆರ್.ಪಿ. ಯಲ್ಲೆ ಇದ್ದಾರೆ. ಏನು ಮಾಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ಕಳೆದ ಬಾರಿ ನನ್ನ ದೊಡ್ಡ ಮಗನಿಗೆ ಹೊಡೆದಿದ್ದರು. ಈ ಬಗ್ಗೆ ಕೇಳುವುದಕ್ಕೆ ಹೋಗಿದಕ್ಕೆ ನಾವೆ ತಪ್ಪಾಗಿ ಮಾತನಾಡಿದ್ದೀವಿ ಎಂದು ನಮ್ಮ ಮೇಲೆ ಪೊಲೀಸ್ ಕರೆಯಿಸಿ ನಮ್ಮನ್ನೆ ದೂರಿದರು. ಇನ್ನು ನೀನು ಚಿನ್ನದ ಮಗ ಪ್ಲೆöÊಟನಲ್ಲಿ ಬಾ ಎಂದಿದ್ದರು. ಗಲಾಟೆ ಮಾಡಿದ ಪರಿಣಾಮವೇ ಜ್ವರ ಬಂದು ರಾತ್ರಿಯೆಲ್ಲಾ ಭಯಭೀತನಾಗಿ ನಿದ್ರೆ ಮಾಡದೇ ಮಿಡುಕಿದ್ದಾನೆ,
ನಾವು ಬಡವರಾದರೇ ಬೇರೆ ಶಾಲೆಯಲ್ಲಿ ಓದಿಸಲು ಸಾಧ್ಯವೆ ಇಲ್ಲವೇ? ನಮ್ಮನ್ನು ಹಿಯಾಳಿಸಿ ನನ್ನ ಮಗನ ಮೇಲೆ ಹೊಡೆದ ರಾಧ ಮೇಡಂ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮನವಿ ಮಾಡಿ ತಮ್ಮ ಅಳಲು ತೋಡಿಕೊಂಡರು. ಇದುವರೆಗೂ ಯಾರಿಗೂ ದೂರು ಮಾಡಿರುವುದಿಲ್ಲ. ಈಗ ಜಿಲ್ಲಾಧಿಕಾರಿಗಳಿಗೆ ದೂರು ಕೊಡಲಾಗಿದೆ ಎಂದು ಹೇಳಿದರು.
ನನ್ನ ಕೈಗೆ, ಬೆನ್ನಿಗೆ ಹೊಡೆಯುತ್ತಾರೆ. ನನ್ನ ಮೆಟ್ರೆ ಹಿಸುಕುತ್ತಾರೆ, ಕೈ ಚಿಂಟುತ್ತಾರೆ ಎಂದು ಇದೆ ವೇಳೆ ಬಾಲಕ ನೂತನ್ ಕೂಡ ತನಗಾದ ನೋವನ್ನು ಹೇಳಿಕೊಂಡನು.