
ಹಾಸನ: ನಗರದ ಜಯನಗರದ ಚಿಕ್ಕಹೊನ್ನೆನಹಳ್ಳಿ ಬಳಿ ಇರುವ ಜೈ ಜೈಮಾರುತಿ ನಗರದಲ್ಲಿ ಸ್ಥಳೀಯ ಜನರ ಜೊತೆ ನಿಂತು ಹಸಿರುಭೂಮಿ ಪ್ರತಿಷ್ಠಾನ ನಿರ್ಮಾಣ ಮಾಡಿದ್ದ ಮಿಯಾವಾಕಿ ಕಾಡಿನ ಗಿಡಗಳನ್ನು ಜೆಸಿಬಿಯಲ್ಲಿ ಧ್ವಂಸ ಮಾಡಿದ ಪೊಲೀಸ್ ಇನ್ಸ್ ಪೆಕ್ಟರ್ ಮನೆ ಮುಂದೆ ಹಸಿರುಭೂಮಿ ಪ್ರತಿಷ್ಠಾನದ ನೇತೃತ್ವದಲ್ಲಿ ನ್ಯಾಯಕ್ಕಾಗಿ ಮಂಗಳವಾರ ಸಂಜೆ ಧರಣಿ ಪ್ರತಿಭಟನೆ ನಡೆಸಿದರು. ಈ ವೇಳೆ ವಾಗ್ವಾದ ನಡೆಯಿತು.
ಹಸಿರುಭೂಮಿ ಪ್ರತಿಷ್ಠಾನದ ಸಂಸ್ಥಾಪಕ ಆರ್.ಪಿ. ವೆಂಕಟೇಶ್ ಮೂರ್ತಿ, ಅಧ್ಯಕ್ಷ ವೆಂಕಟೇಗೌಡ, ಕಾರ್ಯದರ್ಶಿ ಗಿರಿಜಾಂಬಿಕ, ಸದಸ್ಯರಾದ ಪುರುಷೋತ್ತಮ್, ಅಪ್ಪಾಜಿಗೌಡ, ಶಿವಶಂಕರಪ್ಪ, ಮಮತಪಾಟೀಲ್, ದಿನೇಶ್ ಇವರು ಗಿಡಗಳ ಮಾರಾನ ಹೋಮವನ್ನು ಖಂಡಿಸಿ ಪ್ರತಿಭಟಿಸಿದರು. ಗಿಡ ಹಾಕುವ ಮೊದಲು ಇಲ್ಲಿನ ಸ್ಥಳೀಯ ನಿವಾಸಿಗಳ ಜೊತೆ ಸಭೆ ಕೂಡ ಮಾಡಲಾಗಿ ಎಲ್ಲಾರನ್ನು ಗಣನೆಗೆ ತೆಗೆದುಕೊಂಡು ಗಿಡ ನೆಟ್ಟು ಪೋಷಿಸಲಾಗಿತ್ತು. ಗಿಡ ನೆಡುವಾಗ ಎಲ್ಲಾರು ಒಟ್ಟಿಗೆ ಇದ್ದು ಖುಷಿಯಾಗಿದ್ದ ಸಮಯದಲ್ಲಿ ಏಕಾಏಕಿ ಜೆಸಿಬಿಯಲ್ಲಿ ಹಾಕಲಾಗಿದ್ದ ೧೧೦ ಗಿಡಗಳನ್ನು ನೆಲಸಮ ಮಾಡಿದ್ದಾರೆ. ಇದನ್ನು ನೋಡಿದರೇ ಬೇಸರವಾಗುತ್ತದೆ. ಸ್ಥಳೀಯ ನಿವಾಸಿಗಳಿಂದಲೇ ಈ ಕೃತ್ಯ ಮಾಡಿರುವುದನ್ನು ನೋಡಿದರೇ ಸ್ಥಳೀಯರಿಗೆ ಪರಿಸರದ ಬಗ್ಗೆ ಆಸಕ್ತ ಇದಿಯೊ ಇಲ್ಲವೊ ಎನ್ನುವ ಅನುಮಾನವಿದೆ ಎಂದರು.
ಇನ್ನು ಈ ಗಿಡಗಳನ್ನು ಜೆಸಿಬಿಯಲ್ಲಿ ನೆಲಸಮ ಮಾಡಿರುವುದು ಮೊಬೈಲ್ ನಲ್ಲಿ ರೆಕಾರ್ಡ್ ಕೂಡ ಆಗಿದ್ದು, ಗಿಡ ನೆಡುವ ಮೊದಲು ಸಲಹೆ ನೀಡಿದ್ಧರೇ ನಿಮ್ಮ ಸಲಹೆಯಂತೆ ಹಾಕಲಾಗುತಿತ್ತು. ಆದರೇ ಗಿಡ ನೆಟ್ಟು ಬೆಳೆದಿರುವಾಗ ನೆಲಸಮ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ನೆಲಸಮ ಮಾಡಿದವರು ಇದು ನಮ್ಮ ಏರಿಯಾ ನಾವು ಮಾಡಿಕೊಂ,ಡಿದ್ದೇವೆ ಎಂದು ಇವರ ವಿರುದ್ಧವಾಗಿ ಮಾತಿನ ಚಕಾಮುಖಿ ನಡೆಸಿದ ಪ್ರಸಂಗ ನಡೆಯಿತು.