
ಅಂತರ್ಜಾತಿ ಹುಡುಗನನ್ನು ಪ್ರೀತಿಸುತಿದ್ದ ಮಗಳನ್ನು ತಂದೆಯೇ ಮರ್ಯಾದೆಗೇಡು ಹತ್ಯೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬಾರ್ಗೇನ್ ತಾಂಡಾದಲ್ಲಿ ನಡೆದಿದೆ.
ಕಳೆದ ಕೆಲ ದಿನಗಳಿಂದ ಯುವತಿಯು ಪಕ್ಕದ ಹಳ್ಳಿಯ ಅಂತರ್ಜಾತಿ ಹುಡುಗನನ್ನು ಪ್ರೀತಿಸುತಿದ್ದಳು ಎನ್ನಲಾಗಿದ್ದು, ಈ ವಿಷಯವು ಅವಳ ತಂದೆಗೆ ಗೊತ್ತಾಗಿತ್ತು. ಇದರಿಂದ ಸಿಟ್ಟಿಗೆದ್ದಿದ್ದ ಆತ ಪ್ರೀತಿಸುತ್ತಿರುವ ಯುವಕನಿಂದ ದೂರವಿರಲು ತನ್ನ ಮಗಳಿಗೆ ಹೇಳಿದ್ದನು.
ತನ್ನ ಮಗಳಿಗೆ ದೂರವಿರುವಂತೆ ಹೇಳಿದರೂ ಕೂಡ ಯುವತಿಯು ಪ್ರೀತಿಸುವುದನ್ನು ಮುಂದುವರಿಸಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡ ಜಾತಿವಾದಿ ತಂದೆ, ಮನೆಯಲ್ಲೆ ಹಗ್ಗದಿಂದ ಆಕೆಯ ಕುತ್ತಿಗೆಗೆ ಬಿಗಿದು ನಂತರ ಕಟ್ಟಿಗೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾನೆಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಂತಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.