
ಹಾಸನದ ಸರ್ಕಾರಿ ನರ್ಸಿಂಗ್ ಕಾಲೇಜು ಆವರಣದಲ್ಲಿ ಭಾನುವಾರ ಸಾಯಂಕಾಲದ ವೇಳೆ ಬೆಂಕಿ ಕಾಣಿಸಿಕೊಂಡಿದ್ದು, ಹಲವು ಗಿಡಗಳು ಬಹುತೇಕ ನಾಶವಾಗಿವೆ. ಈ ಬಗ್ಗೆ ಸಿಸಿ ಕ್ಯಾಮಾರದಲ್ಲಿ ರೆಕಾರ್ಡ್ ತೆಗೆಯಿಸಿ ಪರಿಶೀಲನೆ ಮಾಡಲಾಗುವುದು. ಇದರಲ್ಲಿ ಯರ್ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾಲೇಜಿನ ನರ್ಸಿಂಗ್ ಮಹಾವಿದ್ಯಾಲಯದ ಉಪನ್ಯಾಸಕಿ ಶೋಭ ಹೇಳಿದ್ದಾರೆ.
ಘಟನೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಭಾನುವಾರದಂದು ಸರ್ಕಾರಿ ರಜೆಯಿದ್ದ ಕಾರಣ ಸಾಯಂಕಾಲದ ವೇಳೆ ನಮ್ಮ ಕಾಲೇಜಿನ ಮಕ್ಕಳು ಕ್ರಿಕೆಟದ ಆಟವಾಡಲು ತರಳಿದ್ದಾರೆ. ಆಟವಾಡಬೇಕಾದರೇ ಕ್ರಿಕೆಟ್ ಬಾಲು ಕಳೆದ ಹೋಗಿದ್ದು, ಹುಡುಕುವ ಸಂದರ್ಭದಲ್ಲಿ ಅಚಾತುರ್ಯವಾಗಿದೆ” ಎಂದರು.
“ಹಸಿರುಭೂಮಿ ಪ್ರತಿಷ್ಠಾಪನೆ ಹಾಗೂ ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಪುಟ್ಟಡವಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಆವರಣದ ಸಾಕಷ್ಟು ಜಾಗದಲ್ಲಿ ಬೆಂಕಿ ಆವರಿಸಿಕೊಂಡಿದೆ. ವಿದ್ಯಾರ್ಥಿಗಳು ಬೆಂಕಿ ನಂದಿಸಿಸಲು ಪ್ರಯತ್ನಿಸಿದರೂ ಪೂರ್ಣ ಪ್ರಮಾಣದಲ್ಲಿ ಸಾಧ್ಯವಾಗಿರುವುದಿಲ್ಲ. ಅವರ ಅಚಾತುರ್ಯದಿಂದಲೇ ಅವಘಡ ನಡೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈಗ ಮತ್ತೆ ಪರಿಸರ ಕಾಳಜಿ ಬರುವಂತೆ ತಿದ್ದಲಾಗುವುದು” ಎಂದರು.
ಇದನ್ನೂ ಓದಿದ್ದೀರಾ? ಮಹಿಳೆಯರ ಮೇಲೆ ಕಾಡಾನೆ ದಾಳಿ
“ಇದರಲ್ಲಿ ಯಾರದ್ದಾದರೂ ಹಸ್ತಕ್ಷೇಪವಿದ್ದರೆ ಅಂಥವರನ್ನು ಖಂಡಿತಾ ಶಿಕ್ಷಗೆ ಗುರಿ ಮಾಡಲಾಗುವುದು. ಇನ್ಮುಂದೆ ಯಾವ ರೀತಿ ಅಹಿತಕರ ಘಟನೆಯನ್ನು ನಮ್ಮ ಸಂಸ್ಥೆಯಲ್ಲಿ ನಡೆಯದಂತೆ ಎಲ್ಲ ಬೋಧಕ ವೃಂದದವರು ಹಾಗೂ ನಮ್ಮ ನೆಚ್ಚಿನ ಪ್ರಾಂಶುಪಾಲರೂ ಕೂಡ ಕೈಜೋಡಿಸಿ ಒಗ್ಗಟ್ಟಾಗಿ ಶ್ರಮಿಸುತ್ತೇವೆ. ಇನ್ನು ಸುಟ್ಟುಹೋಗಿರುವ ಜಾಗವನ್ನು ಮತ್ತೆ ಹಸಿರು ಚಿಗುರಿನಿಂದ ಕಂಗೊಳಿಸುವಂತೆ ಮಾಡುತ್ತೇವೆ. ಈ ಭಾಗದಲ್ಲಿ ನೂರಾರು ಗಿಡವನ್ನು ನೆಟ್ಟು ಇದನ್ನು ವನಸಿರಿಯಾಗಿ ಪರಿವರ್ತಿಸುತ್ತೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಈ ಪುಟ್ಟಡವಿಯನ್ನು ಬರಲು ಶ್ರಮವಹಿಸಿದ ಎಲ್ಲರಲ್ಲೂ ಕಾಲೇಜಿನ ಪರವಾಗಿ ಕ್ಷಮೆ ಕೇಳುತ್ತೇವೆ. ಈ ಬಗ್ಗೆ ನಾವು ಹೊಣೆಗಾರಿಕೆ ಹೊತ್ತು ಮುಂದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳುತ್ತೇವೆ. ಇದು ಮಕ್ಕಳಿಂದಲೇ ದುರ್ಘಟನೆ ನಡೆದಿದೆ. ನಮ್ಮ ಕಾಲೇಜಿನ ಸಿಸಿ ಕ್ಯಾಮೆರಾ ರೆಕಾರ್ಡ್ ತೆಗೆಸಿ ಪರಿಶೀಲನೆ ಮಾಡಲಾಗುವುದು. ಈ ಹಿಂದೆ ಮಕ್ಕಳ ಹಸ್ತಕ್ಷೇಪವಿದ್ದರೆ ಅವರನ್ನು ಗಣನೆಗೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗುವುದು. ಬಳಿಕ ವಿದ್ಯಾರ್ಥಿಗಳ ಮನಪರಿವರ್ತನೆ ಮಾಡಿ ಹಸಿರು ಬಗ್ಗೆ ಜಾಗೃತಿ ಮೂಡಿಸಲಾಗುವುದು” ಎಂದು ಹೇಳಿದರು.