ಹಾಸನ: ನಗರದ ಚನ್ನಪಟ್ಟಣ ಹೌಸಿಂಗ್ ಬೋರ್ಡ್ ಕಾಲೋನಿ ವಿವೇಕಾನಂದ ವೃತ್ತದ ಬಳಿ ಹಸಿರುಭೂಮಿ ಪ್ರತಿಷ್ಠಾನದ ಸಂಯುಕ್ತಾಶ್ರಯದಲ್ಲಿ ಹಸಿರು ಪರಿಸರ ತರಬೇತಿ ಕಟ್ಟಡಕ್ಕೆ ಹಾಸನ ನಗರಸಭೆಯ ಮಾಜಿ ಅಧ್ಶಕ್ಷರು ಹಾಗು 34ನೇ ವಾರ್ಡ್ನ ಹಾಲಿ ಸದಸ್ಶ ಆರ್. ಮೋಹನ್ ಅವರು ಭೂಮಿ ಪೂಜೆ ನೆರವೇರಿಸಿ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಆರ್. ಮೋಹನ್ ಮಾತನಾಡಿ, ಹಾಸನ ನಗರದ ಕೆರೆಗಳ ಪುನಶ್ಚೇತನಕ್ಕೆ ಹಸಿರುಭೂಮಿ ಪ್ರತಿಷ್ಠಾನ ತಂಡವು ಪ್ರಮುಖ ಕಾರಣವಾಗಿದೆ, ನಗರದ ಹಾಗು ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ಶಾನವನಗಳಲ್ಲಿ, ಕಾಲೇಜುಗಳ ಆವರಣಗಳಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುತ್ತಾ ಪರಿಸರ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ಚನ್ನಪಟ್ಟಣ ಹೌಸಿಂಗ್ ಬೋರ್ಡ್ನ ವಿವೇಕಾನಂದ ವೃತ್ತದ ಪ್ರತಿಷ್ಠಾನದ ಹಸಿರುಸಿರಿಯ ಸಸ್ಶಪಾಲನ ಕ್ಷೇತ್ರದಲ್ಲಿ ಮಾತನಾಡಿ ಶಂಕುಸ್ಥಾಪನೆ ಮಾಡಿ ಪ್ರತಿಷ್ಠಾನದ ಕೆಲಸವನ್ನು ಶಾಘ್ಲಿಸಿದರು.
ಹಸಿರುಸಿರಿಯ ಸಂಚಾಲಕ ಪಿ. ಪುರುಷೋತ್ತಮ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಗರಸಭೆಗೆ ಸೇರಿದ ಉದ್ಶಾನವನಕ್ಕೆ ಮೀಸಲಿಟ್ಟ ಈ ಸ್ಥಳದಲ್ಲಿ ಹಸಿರಿಸಿರಿ ನಿರ್ಮಾಣಕ್ಕೆ ನಗರಸಭೆಯ ಅಧ್ಶಕ್ಷರಾಗಿದ್ದ ಅವಧಿಯಲ್ಲಿ ಆರ್.ಮೋಹನ್ ಅವರು ಚಾಲನೆ ನೀಡಿದರು. ಮಾಜಿ ಶಾಸಕರಾದ ಪ್ರೀತಂಗೌಡ ಅವರು ಬೇಲಿ ಹಾಗು ಗಜೀಬೋ ನರ್ಮಿಸಿಕೊಟ್ಟರು. ಹರಿಹಳ್ಳಿಯ ಸಾವಯಕ ಕೃಷಿಕ ವಿ.ಪಿ.ಹೆಗ್ದೆಯವರು ಬಯಲು ರಂಗಮAದಿರ ನರ್ಮಿಸಲು 6 ಲಕ್ಷ ರೂ. ಹಣ ನೀಡಿದರು. ಹಾಗು ವಿವಿಧ ದಾನಿಗಳು ನೀಡಿದ ಹಣದಿಂದ 44 * 44 ಅಡಿ ಅಗಲ ಹಾಗು 25 ಅಡಿ ಆಳದ ಕಲ್ಶಾಣಿ ನರ್ಮಿಸಲಾಗಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಮೊಸಳೆಹೊಸಳ್ಳಿ ಸಮೀಪದ ಹಾಲೇನಹಳ್ಳಿಯ ಶಿವಕುಮಾರ್ ಅವರು 2 ಲಕ್ಷ ರೂ ಮೌಲ್ಶದ ಸೋಲಾರ್ ಪಂಪ್ಸೆಟ್ ವ್ಶವಸ್ಥೆ ಮಾಡಿಕೊಟ್ಟಿದ್ದಾರೆ . ಈ ಸ್ಥಳದಲ್ಲಿ ಪರಿಸರ ತರಬೇತಿ ಕೇಂದ್ರ ಅಭಿವೃದ್ದಿ ಪಡಿಸಲು ವಿ.ಪಿ. ಹೆಗ್ಡೆಯವರು ನೆರವು ನೀಡಲಿದ್ದಾರೆ ಎಂದು ವಿವರಿಸಿದರು.
ಆರ್.ಪಿ.ವೆಂಕಟೇಶ್ ಮೂರ್ತಿ ಅವರು ಮಾತನಾಡಿ, ಪರಿಸರ ತರಬೇತಿ ಕೇಂದ್ರದಲ್ಲಿ ಪರಿಸರ ಸಂಬAಧಿಸಿದ ಪತ್ರಿಕೆಗಳು ಹಾಗು ಪುಸ್ತಕಗಳನ್ನು ತರಿಸಿ ಒಂದು ಪುಟ್ಟ ಪುಸ್ತಕಭಂಡಾರವನ್ನು ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ ಹಾಸನ ನಗರ ಸುತ್ತ ಮುತ್ತ 2017ರಿಂದ ಪರಸರ ಸಂರಕ್ಷಣೆಯ ಚಟುವಟಿಕೆಗಳನ್ನು ನಡೆಸುತ್ತ ಬಂದಿರುವ ಹಸಿರುಭೂಮಿ ಪ್ರತಿಷ್ಠಾನ ಚನ್ನಪಟ್ಟಣ ಹಭಸಿಂಗ್ ಬೋರ್ಡ್ ಬಡವಾವಣೆಯಲ್ಲಿ ಹಸಿರುಸಿರಿ ಹೆಸರಿನಲ್ಲಿ ಒಂದು ಪುಟ್ಟ ಸಸ್ಶಕ್ಷೇತ್ರವನ್ನು ಅಭಿವೃದ್ದಿ ಪಡಿಸಿದ್ದು, ಇಲ್ಲಿ ನೂತನವಾಗಿ ಒಂದು ಕಲ್ಶಾಣಿ ನರ್ಮಿಸಲಾಗಿದೆ. ಕುಡಿಯುವ ನೀರಿಗಾಗಿ ಮಳೆನೀರು ಕೊಯ್ಲು ವ್ಶವಸ್ಥೆ ಮಾಡಲಾಗಿದೆ. ಇಲ್ಲಿ ಪ್ರೌಢಶಾಲೆ ಹಾಗು ಕಾಲೇಜು ವಿದ್ಶಾರ್ಥಿಗಳಿಗೆ ಪರಿಸರದ ಕುರಿತು ಅರಿವು ಮೂಡಿಸಲು ಪರಿಸರ ತರಬೇತಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ ಎಂದರು.
ಟ್ರಸ್ಟಿ ಶಿವಶಂಕರಪ್ಪ ಅವರು ಮಾತನಾಡಿ ನಗರಸಭೆಯವರು ಹಸಿರುಸಿರಿ ಉಳಿಸಿ ಬೆಳೆಸಲು ಅನುಕೂಲವಾಗುವಂತೆ ಅನುಮತಿ ಪತ್ರವನ್ನು ನೀಡಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಅಧ್ಶಕ್ಷತೆ ವಹಿಸಿದ್ದ ಹಸಿರುಭೂಮಿ ಪ್ರತಿಷ್ಠಾನದ ಅಧ್ಶಕ್ಷರಾದ ಸಿ.ಬಿ.ವೆಂಕಟೇಗೌಡ ಮಾತನಾಡಿ, ಪ್ರತಿಷ್ಠಾನ ಪರಿಸರ ಸಂಬAಧಿ ಕೆಲಸಗಳನ್ನು ನಿರಂತರವಾಗಿ ಮಾಡುತ್ತಿದ್ದು, ಎಲ್ಲರಿಗೂ ಪರಿಸರದ ಕಾಳಜಿ ಇಂದಿನ ತುರ್ತು ಅಗತ್ಶತೆ ಆಗಬೇಕಿದೆ ಎಂದರು. ಹಾಗು ಹಸಿರುಸಿರಿಯ ಬೆಳವಣಿಗೆಗೆ ಸಹಕಾರ ನೀಡಿದ ಮಾಜಿ ಶಾಸಕ ಪ್ರೀತಂ ಜೆ. ಗೌಡ & ಮಾಜಿ ನಗರಸಭೆ ಅಧ್ಶಕ್ಷರಾದ ಆರ್. ಮೋಹನ್ ಅವರಿಗೆ ಧನ್ಶವಾದಗಳನ್ನು ತಿಳಿಸಿದರು.
ಪ್ರತಿಷ್ಠಾನದ ಟ್ರಸ್ಟಿಗಳು, ನಗರಸಭೆ ಆರೋಗ್ಶ ನಿರೀಕ್ಷಕ ಪ್ರಸಾದ್, ರೋಟರಿ ಸಂಸ್ಥೆಯ ಸದಸ್ಶರು, ಹಲವು ಸಂಘ ಸಂಸ್ಥೆಯ ಪರಿಸರ ಪ್ರೇಮಿ ಸದಸ್ಶರು, ರಾಜೀವ್ ಇಂಜಿನಿಯರಿಂಗ್ ಕಾಲೇಜ್ ವಿದ್ಶಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಎಂ.ಬಿ. ಗಿರಿಜಾಂಬಿಕ ಅವರು ಸ್ವಾಗತಿಸಿದರು. ಟಿ.ಹೆಚ್.ಅಪ್ಪಾಜಿಗೌಡ ಅವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಖಜಾಂಚಿ ಬಿ.ಎಸ್.ಭವಾನಿ ನೆರವೇರಿಸಿದರು.