ಹಾಸನ ಜಿಲ್ಲೆ ಸಮರ್ಪಕ ಅಭಿವೃದ್ದಿಗೆ ಶ್ರೇಯಸ್ ಪಟೇಲ್ ಒತ್ತು. ನವದೆಹಲಿಯಲ್ಲಿ ಮಾನ್ಯ ಕಾರ್ಮಿಕ ಸಚಿವರಾದ ಶ್ರೀ ಮನ್ಸುಖ್ ಮಾಂಡವೀಯ ಅವರು ಮತ್ತು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರನ್ನು ಭೇಟಿಯಾಗಿ, ಹಾಸನ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಮನವಿಗಳನ್ನು ಸಲ್ಲಿಸಿದ ಶ್ರೇಯಸ್ ಪಟೇಲ್ ಹಾಸನ ಜಿಲ್ಲೆಯ ಇಎಸ್ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ, ಅಭಿವೃದ್ಧಿ ನಡೆಸುವಂತೆ ಸಚಿವರಿಗೆ ಮನವಿ . ಆಸ್ಪತ್ರೆಯ ಅಭಿವೃದ್ಧಿಯಿಂದ, ವಿಮೆ ಹೊಂದಿರುವ ಕಾರ್ಮಿಕರಿಗೆ ಪ್ರಯೋಜನವಾಗಲಿದೆ. ಹಾಸನ ಜಿಲ್ಲಾ ಕ್ರೀಡಾಂಗಣದಲ್ಲಿ ನೂತನ ಹಾಕಿ ಟರ್ಫ್ ನಿರ್ಮಾಣವಾದರೆ, ರಾಷ್ಟ್ರೀಯ ಕ್ರೀಡೆಗೆ ನೆರವಾಗಲಿದೆ. ಇದಕ್ಕಾಗಿ ಖೇಲೋ ಇಂಡಿಯಾ ಯೋಜನೆಯಡಿ ಹತ್ತು ಕೋಟಿ ರೂಪಾಯಿಗಳ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರುಇದೇ ರೀತಿ, ಜಿಲ್ಲಾ ಕ್ರೀಡಾಂಗಣದಲ್ಲಿ ಫುಟ್ಬಾಲ್ ಅಂಕಣದ ನಿರ್ಮಾಣಕ್ಕಾಗಿ ಖೇಲೋ ಇಂಡಿಯಾ ಯೋಜನೆಯಡಿ ಹತ್ತು ಕೋಟಿ ರೂಪಾಯಿಗಳ ಅನುದಾನ ಒದಗಿಸುವಂತೆ ಕೋರಿಕೆ ಸಲ್ಲಿಸಿದರು.ನನ್ನ ಮನವಿಗಳಿಗೆ ಪೂರಕವಾಗಿ ಸ್ಪಂದಿಸಿರುವ ಸಚಿವರು, ಮುಂದಿನ ದಿನಗಳಲ್ಲಿ ಅವುಗಳನ್ನು ಕಾರ್ಯರೂಪಕ್ಕೆ ತರುವ ಭರವಸೆ ಇದೆ “
– ಶ್ರೇಯಸ್ ಪಟೇಲ್ ( ಸಂಸದರು ಹಾಸನ ಲೋಕಸಭಾ ಕ್ಷೇತ್ರ )