
ಹಾಸನ: ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಹಾಸನ ಜಿಲ್ಲಾ ನೂತನ ಸಮಿತಿ ರಚನೆಯಾಗಿದೆ. ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸುವ ರಾಜ್ಯಪಾಲರ ನಡೆಗೆ ನಮ್ಮ ಅಕ್ಕಂದಿರು ತಾಯಂದಿರನ್ನು ರಕ್ಷಿಸಲು ಜಿಲ್ಲಾ ರೈತ ಸಂಘ ಹೋರಾಡುತ್ತಿದ್ದೇವೆ ಎಂದು ಹಿರಿಯ ರೈತ ಮುಖಂಡ ಕಣಗಾಲ್ ಮೂರ್ತಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸುವ ರಾಜ್ಯಪಾಲರ ನಡೆಗೆ ನಮ್ಮ ಅಕ್ಕಂದಿರು ತಾಯಂದಿರನ್ನು ರಕ್ಷಿಸಲು ಜಿಲ್ಲಾ ರೈತ ಸಂಘ ಹೋರಾಡುತ್ತಿದೆ ಮತ್ತು ಗ್ರಾಮೀಣ ಯುವ ಜನರು ಕಂಕಣಕಟ್ಟಲು ಜಿಲ್ಲಾ ರೈತ ಸಂಘದ ಕರೆ ನೀಡುತ್ತಿದೆ ಗ್ರಾಮೀಣ ಮಹಿಳೆಯರು ಮತ್ತು ರೈತ ಮಕ್ಕಳನ್ನು ರಕ್ಷಿಸಲು ಜಿಲ್ಲಾ ರೈತ ಸಂಘದ ವತಿಯಿಂದ ಯುವ ಪಡೆಯನ್ನು ತಯಾರು ಮಾಡಿ ಮೈಕ್ರೋ ಫೈನಾನ್ಸ್ ತೊಲಗಿಸಿ ಎಂಬ ಘೋಷಣೆಯೊಂದಿಗೆ ನಾಮಫಲಕ ಹಾಕಿ ತೊಲಗಿಸಲು ಹೋರಾಟ ಮಾಡಲು ನಮ್ಮ ರೈತ ಸಂಘ ಕಂಕಣವಾಗಿ ನಿಂತಿದೆ. ಹಾಸನ ತಾಲೂಕು ಶಾಂತಿ ಗ್ರಾಮ ಹೋಬಳಿ ಮರಕೋಲಿ, ಚಿಗಳ್ಳಿ ಸುತ್ತಮುತ್ತಲಿನ ಗಣಿಗಾರಿಕೆಯವರು ಸುಮಾರು 300 ಅಡಿಗೋ ಆಳದಿಂದ ಭೂ ಒಡಲನ್ನು ಬಗೆಯುತ್ತಿದ್ದು, ಸುತ್ತಮುತ್ತಲಿನ ರೈತರು ಕೊಳವೆ ಬಾವಿಗಳು ಇವರು ತಿಡಿಸುವ ಸಿಡಿಮದ್ದು ಅಥವಾ ಸ್ಪೋಟಕಗಳಿಂದ ಹಾಳಾಗುತ್ತಿವೆ ಮತ್ತು ಹತ್ತಿರದ ಮನೆಗಳು ಅಲುಗಾಡಿಗೆ ನಡುಗಿ ಬಿರುಕು ಬಿಡುತ್ತಿದ್ದು, ಆದ್ದರಿಂದ ಶರತ್ತು ಪಾಲಿಸದೆ ಇರುವ ಗಣಿ ಗುತ್ತಿಗೆದಾರರ ಲೈಸೆನ್ಸ್ ಅನ್ನು ರದ್ದುಪಡಿಸಬೇಕೆಂದು ಜಿಲ್ಲಾ ಸಾಮೂಹಿಕ ರೈತರ ಸಂಘ ಆಗ್ರಹಿಸುತ್ತದೆ ಎಂದರು.
ಹಾಸನ ಜಿಲ್ಲಾದ್ಯಂತ ಬೆಳೆದಿರುವ ಶುಂಠಿಗೆ ನ್ಯಾಯವಾದ ಬೆಲೆ ಇಲ್ಲದೆ ಹಾಕಿದ ಬಂಡವಾಳವು ಬರದೇ ರೈತರ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ನಮ್ಮ ಜಿಲ್ಲಾ ಆಡಳಿತವು ಕೇಂದ್ರ ಸರ್ಕಾರಕ್ಕೆ ಕನಿಷ್ಠ 60 ಕೆಜಿ ಶುಂಠಿಗೆ 3000 ನಿಗದಿಪಡಿಸುವಂತೆ ಶಿಫಾರಸ್ಸು ಮಾಡಬೇಕೆಂದು ಜಿಲ್ಲಾ ರೈತ ಸಂಘ ಒತ್ತಾಯಿಸುತ್ತಿದೆ. ಹಾಸನ ಜಿಲ್ಲೆಯಾದ್ಯಂತ ನಮೋನೆ 53 50 37ರ ಅರ್ಜಿಗಳು ಸುಮಾರು ವರ್ಷಗಳಿಂದ ನೆನೆದು ರೈತರು ಕಂಗಲಾಗಿದ್ದಾರೆ ಆದ್ದರಿಂದ ಉಳುವ ರೈತರಿಗೆ ಸ್ಥಳ ಪರಿಶೀಲಿಸಿ ಅವುಗಳಿಗೆ ಮಂಜೂರು ಪಡಿಸಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು. ರೈತರ ನೆರವಿಗೆ ಬರಬೇಕಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಕಷ್ಟಕ್ಕೆ ಸಂಬAಧಿಸಿದ ಸಾಲದ ಮೊತ್ತವನ್ನು 52ರ ಕಡಿತ ಮಾಡಿದ್ದು, ಬ್ಯಾಂಕುಗಳಲ್ಲಿ ರೈತರಿಗೆ ಸಾಲ ಸೌಲಭ್ಯ ಸಿಗದ ಕಾರಣ ರೈತರುಗಳು ಖಾಸಗಿ ಸಂಸ್ಥೆಗಳ ಮುಖಾಂತರ ಸಾಲಕ್ಕೆ ಮುಖ ಮಾಡಿ ರೈತರು ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಾ ಹಿಂದೆ ಬಿದ್ದಿದ್ದಾರೆ ಮತ್ತು ಸಾಲ ತೀರಿಸಲಾಗದೆ ಆದ್ದರಿಂದ ಬ್ಯಾಂಕುಗಳಿಗೆ ರೈತರಿಗೆ ಸಕಾಲಕ್ಕೆ ಸಾಲ ದೊರೆಯಬೇಕು. ಜಿಲ್ಲೆಯಾದ್ಯಂತ ಪಿ ಎಂಬ ಹೆಸರಿನ ಸರ್ವೆ ನಂಬರ್ ಗಳಲ್ಲಿ ಕ್ರಮ ಲೇಔಟ್ ಗಳ ನಿರ್ಮಾಣ ಮಾಡುತ್ತಿದ್ದು, ರೈತರಿಗೆ ದುರಸ್ತಿಯಾಗದ ಕಾರಣ ಲೇಔಟ್ ಗಳ ಮಾಡುವವರಿಗೆ ಕಡಿಮೆ ಬೆಲೆಗೆ ಭೂಮಿ ನೀಡಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ದೂರಿದರು. ಆದ್ದರಿಂದ ರೈತರು ಜಮೀನುಗಳನ್ನು ದುರಸ್ತಿ ಮಾಡಿಕೊಡಬೇಕೆಂದು ಜಿಲ್ಲಾಡಳಿತಕ್ಕೆ ರೈತ ಸಂಘ ಒತ್ತಾಯಿಸುತ್ತಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ತಾಲೂಕು ಅಧ್ಯಕ್ಷ ಮಂಜು, ಬೇಲೂರು ತಾಲೂಕು ಅಧ್ಯಕ್ಷ ಕೆ.ಪಿ. ಕುಮಾರ್, ಅರಕಲಗೂಡು ತಾಲೂಕು