
ಹಾಸನ: ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಇತ್ತಿಚಿಗೆ ನಿಧನರಾದ ಹಿರಿಯ ಪತ್ರಕರ್ತ ಎಸ್.ಎನ್. ಅಶೋಕ್ ಕುಮಾರ್ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಎರಡು ನಿಮಿಷ ಮೌನ ಆಚರಿಸಿ ನಂತರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸುವುದರ ಮೂಲಕ ಅರ್ಥಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.
ನಿಧನರಾದ ಅಶೋಕ್ ಕುಮಾರ್ ಅವರ ಪುತ್ರ ಡಾ. ನಿತಿನ್ ಮಾತನಾಡಿ, ಗೋಮಟವಾಣಿ ಕಳೆದ 44 ವರ್ಷದಲ್ಲಿ ಪತ್ರಿಕೆ ನಡೆದುಕೊಂಡು ಬಂದಿದೆ. ಪತ್ರಿಕೋದ್ಯಮಕ್ಕೆ ಮಾತ್ರ ಸೀಮಿತವಾಗದೇ ಶಿಕ್ಷಣ ಸಂಸ್ಥೆ ಕೂಡ ನಡೆಸುತ್ತಿದ್ದರು. ಅನೇಕ ಸಮಾಜ ಸೇವಾ ಕೆಲಸ ಮಾಡಿಕೊಳ್ಳುತ್ತಾ ಬಂದಿದ್ದಾರೆ. ಒಳ್ಳೆ ಸಾವಯವ ಕೃಷಿಕರು ಆಗಿದ್ದರು. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿದ್ದರು. ಮಾಧ್ಯಮ ಸ್ನೇಹಿ ಮತ್ತು ವೈದ್ಯರು ಎನ್ನುವ ಮಾತು ಸತ್ಯ. ಈ ನುಡಿನಮನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಹೇಳಿದರು.
ಇದೆ ವೇಳೆ ಪತ್ರಕರ್ತರ ಸಂಘದ ರಾಜ್ಯ ಕರ್ಯಕಾರಣಿ ಸದಸ್ಯ ಹೆಚ್.ಬಿ. ಮದನ್ ಗೌಡ ಮಾತನಾಡಿ, ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಹೋದಾಗ ಬೆನ್ನುತೊಟ್ಟಿ ಪ್ರೋತ್ಸಾಹಿಸುವ ಮೂಲಕ ನನಗೆ ಉತ್ಸಹ ಕೊಟ್ಟಿದ್ದಾರೆೆ. ಸ್ವಾಮೀಜಿ ಮತ್ತು ಅಶೋಕ್ ಕುಮಾರ್ ಅವರ ಮಾರ್ಗದರ್ಶನ ನನಗೆ ಸಿಕ್ಕಿದೆ. ಅಶೋಕ್ ಕುಮಾರ್ ಇವರದು ಜೈನ ಸಮುದಾಯಕ್ಕೆ ಮತ್ತು ಪತ್ರಿಕೋಧ್ಯಮಕ್ಕೆ ಬಹು ದೊಡ್ಡ ಕೊಡುಗೆ ಸಿಕ್ಕಿದೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಹೆಚ್. ವೇಣುಕುಮಾರ್ ಮಾತನಾಡಿ, ಅಶೋಕ್ ಕುಮಾರ್ ಅವರು ನಮಗೆಲ್ಲಾ ಮಾರ್ಗದರ್ಶಕರಾಗಿ ಉಳಿದುಕೊಂಡಿದ್ದು, ಅವರ ನಡವಳಿಕೆಗಳೆ ಮುಂದಿನ ದಿನಗಳ ದಾರಿ ದೀಪವಾಗಿದೆ. ಮಹಾಮಸ್ತಾಭಿಷೇಕದಲ್ಲಿ ಅವರ ಪಾತ್ರ ಉತ್ತಮವಾಗಿತ್ತು. ಅವರ ಗೋಮಟವಾಣಿ ಪತ್ರಿಕೆ ದೇಶದ ಉದಲಕ್ಕೂ ಹರಡಿತ್ತು. ಎಲ್ಲಾ ಮಾಧ್ಯಮದವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಎಲ್ಲರನ್ನು ಒಟ್ಟಾಗಿ ಕೊಡೊಯ್ದಿದ್ದಾರೆ ಎಂದು ಇದೆ ವೇಳೆ ನೆನಪಿಸಿಕೊಂಡು ಆತ್ಮಕ್ಕೆ ಶಾಂತಿ ಕೋರಿದರು.
ಇದೆ ವೇಳೆ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಉದಯಕುಮಾರ್, ಮಾಧ್ಯಮ ಅಕಾಡೆಮಿ ಪ್ರಶ್ತಿ ವಿಜೇತರಾದ ವೆಂಕಟೇಶ್, ಹೊಳೆನರಸೀಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್ ಹಾಗೂ ಸಂಘದ ಖಜಾಂಚಿ ಕುಮಾರ್ ಸೇರಿದಂತೆ ಇತರರು ಮಾತನಾಡಿ, ಪತ್ರಿಕೋದ್ಯಮದಲ್ಲಿ ನಿಧನರಾದ ಅಶೋಕ್ ಕುಮಾರ್ ಉತ್ತಮ ಬಾಂಧವ್ಯ ಹೊಂದಿದ್ದರು. ಅಶೋಕ್ ಕುಮಾರ್ ಜೊತೆ ಇಪತ್ತೆöÊದು ವರ್ಶಗಳ ಒಡನಾಟವಿದೆ. ಅವರ ಆದರ್ಶಗಳು ನಮಗೆಲ್ಲಾ ಸ್ಪೂರ್ತಿಯಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದರು. ಪತ್ರಿಕೆಗಳ ಬಗ್ಗೆ ತನ್ನದೆಯಾದ ಗೌರವ ಹೊಂದಿದ್ದರು ಎಂದು ನೆನಪಿಸಿಕೊಂಡರು.
ಇದೆ ವೇಳೆ ಸಭೆಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ. ಶಶಿಧರ್, ಉಪಾಧ್ಯಕ್ಷರಾದ ಮೋಹನ್ ಕುಮಾರ್, ಕೆ.ಎಂ. ಹರೀಶ್, ಡಿ.ವಿ. ಮೋಹನ್, ಕಾರ್ಯದರ್ಶಿ ಬಿ.ಸಿ. ಸಂತೋಷ್, ಶ್ರೀನಿವಾಸ್ ಪಿ.ಎ. ಇತರರು ಉಪಸ್ಥಿತರಿದ್ದರು.