ಹಾಸನ: ತಿರಗಾಡುವ ರಸ್ತೆಗೆ ಅಡ್ಡಗಟ್ಟಿ ತೊಂದರೆ ಕೊಡುತ್ತಿದ್ದು, ಅದನ್ನು ಬಿಡಿಸಿ ಕೊಡುವಂತೆ ಪಿಡಿಓ ರಘುನಾಥ್ ರವರಿಗೆ ಮತ್ತು ಇಒ ವಸಂತ್ ಕುಮಾರ್ ರವರಿಗೆ ಮನವಿ ಮಾಡಿದರು ಕ್ರಮ ಕೈಗೊಳ್ಳದ ಕಾರಣ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಒತ್ತಾಯಿಸಿ ಜಿಲ್ಲಾ ಪಂಚಾಯತ್ ಕಛೇರಿ ಮುಂದೆ ಗೋಣಿ ಸೋಮನಹಳ್ಳಿಯ ಜಯಕುಮಾರ್ ಕುಟುಂಬದವರು ಧರಣಿ ನಡೆಸಿದರು.
ಇದೆ ವೇಳೆ ಜಯಕುಮಾರ್ ಮಾಧ್ಯಮದೊಂದಿಗೆ ಮಾತನಾಡಿ, ಬೇಲೂರು ತಾಲೂಕು ಹಳೇಬೀಡು ಹೋಬಳಿ, ಗೋಣಿ ಸೋಮನಹಳ್ಳಿ ಗ್ರಾಮದ ಗ್ರಾಮ ಠಾಣ ವ್ಯಾಪ್ತಿಯಲ್ಲಿ ನಮ್ಮದೊಂದು ಇ- ಖಾತೆ ಉಳ್ಳ ವಾಸದ ಮನೆ ಇದ್ದು, ಈ ವಾಸದ ಮನೆಯ ಪಶ್ಚಿಮಕ್ಕೆ ಇದೆ. ನಮ್ಮ ಗ್ರಾಮದ ಗವಿ ಗೌಡ ಬಿನ್ ಗುಡ್ಡೆ ಗೌಡ ರವರಿಗೆ ಪ್ರತ್ಯೇಕ ೩ ಖಾತೆಗಳಿದ್ದು, ಖಾತೆ ಸಂಖ್ಯೆ ೪೦,೪೧, & ೪೨ ಅಗಿದ್ದು, ಈ ೪೧ ಮತ್ತು ೪೨ರ ಖಾತೆ ಮಧ್ಯೆ ೧೨ ಅಡಿ ಖಾಲಿ ಜಾಗ ಇದ್ದು ಈ ಖಾಲಿ ಜಾಗದಲ್ಲಿರುವ ನಾವು ಅನಾದಿ ಕಾಲದಿಂದಲೂ ತಿರುಗಾಡುತ್ತ ಬರುತ್ತಿದ್ದೇವೆ ಎಂದರು. ಗವಿಗೌಡರ ಕುಟುಂಬದವರಾದ ರುದ್ರೇಗೌಡ, ಮೊಗಣ್ಣಗೌಡ, ಕಾಂತರಾಜು, ಭಾಗ್ಯಮ್ಮ ಇವರುಗಳು ನಾವು ತಿರುಗಾಡದಂತೆ ನಾವು ತಿರುಗಾಡುತ್ತಿದ್ದ ದಾರಿಗೆ ಅಡ್ಡ ಬೇಲಿ ಕಟ್ಟಿ, ಕಲ್ಲು ಸುರಿದು ಅಂಚು ಪುಡಿ ಮಾಡಿರುವುದು ದನ ಅಡಗಟ್ಟಿ ತಿರುಗಾಡದಂತೆ ಅಡ್ಡಿಪಡಿಸಿದ್ದು ಅಲ್ಲದೆ ಕುಡಿಯುವ ನೀರಿನ ಸೌಲಭ್ಯವನ್ನು ನೀಡದಂತೆ ಪದೇ ಪದೇ ಅಡ್ಡಿಪಡಿಸಿರುತ್ತಾರೆ ಎಂದು ದೂರಿದರು.
ಈ ಸಂಬಂಧ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಘುನಾಥ್ ಹಾಗೂ ಇಓ ವಸಂತ್ ಕುಮಾರ್ ರವರಿಗೆ ಹಲವಾರು ಬಾರಿ ಅಂಗಲಾಚಿ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಮತ್ತು ಅಧಿಕಾರಿಗಳೇ ನನಗೆ ನ್ಯಾಯಾಲಯಕ್ಕೆ ಹೋಗುವಂತೆ ಸೂಚಿಸಿದ್ದು. ಅದರಂತೆ ಬೇಲೂರು ಸಿವಿಲ್ ನ್ಯಾಯಾಲಯದಲ್ಲಿ ತಡೆಯಜ್ಞ ತಂದಿದ್ದು. ತಡೆಯಜ್ಞ ತಂದಿದ್ದರು ಸಹ ರಸ್ತೆ ಅಡ್ಡಗಟ್ಟುತ್ತಿದ್ದು ಅಡ್ಡ ಕಟ್ಟುತ್ತಿರುವ ವ್ಯಕ್ತಿಗಳ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ತೋರುತ್ತಿದ್ದು, ಈ ಸಂಬಂಧ ೨೦೨೪ ನವೆಂಬರ್ ೧೫ ರಂದು ಮಾನ್ಯ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಪ್ರತಿಭಟನೆ ಸಹ ಮಾಡಿರುತ್ತೇವೆ ಆದರೂ ಸಹ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದರು. ನಮಗೆ ಈ ದಾರಿ ಬಿಟ್ಟರೆ ಬೇರೆ ಯಾವ ದಾರಿ ಇರುವುದಿಲ್ಲ ಆದಕಾರಣ ಯಾವುದೇ ಕ್ರಮ ಕೈಗೊಳ್ಳದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಂಡು. ನಮಗೆ ತಿರುಗಾಡಲು ಅಡ್ಡಿಪಡಿಸುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ ಎಂದು ಹೇಳಿದರು. ಕೋರ್ಟಿಗೂ ಸಿದ್ಧ ಇಲ್ಲವಾದರೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ಬೇಸರದಲ್ಲಿ ಹೇಳಿದರು.
ಧರಣಿಯಲ್ಲಿ ಗ್ರಾಮದ ಹುಲಿಯಪ್ಪ, ಎನ್.ಆರ್. ತಾರಾಮಣಿ, ಯೋಗೀಶ್, ಎಸ್.ಟಿ. ಕವಿತಾ, ಜಯಕ್ಕ ಇತರರು ಉಪಸ್ಥಿತರಿದ್ದರು.